ನಮ್ಮೂರುಮೈಸೂರು

ಉದಯಗಿರಿ ಪೊಲೀಸರ ಬಿರುಸಿನ ಕಾರ್ಯಾಚರಣೆ ; ಮೂವರು ದ್ವಿಚಕ್ರ ವಾಹನ ಕಳ್ಳರ ಬಂಧನ

ಮೈಸೂರು,ಡಿ.8 : – ನಗರದ ಉದಯಗಿರಿ ಪೊಲೀಸರು ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ,ಸುಮಾರು 2,50,000 ರೂ ಬೆಲೆ ಬಾಳುವ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚು ವರದಿಯಾದ ಮೇರೆಗೆ  ಡಿಸೆಂಬರ್ ಮಾಹೆಯಲ್ಲಿ ಅಪರಾಧ ತಡೆ ಮಾಸಾಚರಣೆ ಇರುವ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತರು ಅಪರಾಧ ಪತ್ತೆ ಬಗ್ಗೆ ವಿಶೇಷ ತಂಡಗಳನ್ನು ರಚಿಸಿದ್ದರು, ಅದರಂತೆ ಕಾರ್ಯಪ್ರವೃತ್ತರಾದ ದೇವರಾಜು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ  ಎಂ.ಶಶಿಧರ್ ನೇತೃತ್ವದಲ್ಲಿ  ಉದಯಗಿರಿ ಪೊಲೀಸ್ ಠಾಣಾ ಪಿ.ಐ ಪಿ.ಕೆ ರಾಜು ತಂಡ ಡಿ.6  ರಂದು ಮೂವರು ದ್ವಿಚಕ್ರ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಆರೋಪಿಗಳ ಬಳಿ ಇದ್ದ ಸುಮಾರು 2,50,00 ರೂ ಬೆಲೆ ಬಾಳುವ 04 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯದಿಂದ ಉದಯಗಿರಿ ಪೊಲೀಸ್ ಠಾಣೆಯ-2, ನರಸಿಂಹರಾಜ ಪೊಲೀಸ್ ಠಾಣೆಯ-1 ಮತ್ತು ಕುವೆಂಪುನಗರ ಪೊಲೀಸ್ ಠಾಣೆಯ -1 ದ್ವಿಚಕ್ರ ವಾಹನಗಳ ಪ್ರಕರಣಗಳು ಪತ್ತೆಯಾಗಿರುತ್ತದೆ.

ಈ ಪತ್ತೆ ಕಾರ್ಯವನ್ನು ಡಿ.ಸಿ.ಪಿ ಗೀತಾಪ್ರಸನ್ನ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ ಎಂ.ಶಶಿಧರ್ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪಿ.ಕೆ. ರಾಜು, ಪಿ.ಎಸ್.ಐ ಸುನೀಲ್, ನಾಗರಾಜ್ ನಾಯಕ,ಸಿಬ್ಬಂದಿಯವರುಗಳಾದ ಸಿದ್ದೀಕ್ ಅಹಮದ್, ಸೋಮಶೇಖರ್, ಮೋಹನ್ ಕುಮಾರ್, ಶಿವರಾಜಪ್ಪ, ಸಮೀರ್  ನಡೆಸಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಐ.ಪಿ.ಎಸ್. ಪ್ರಶಂಸಿಸಿರುತ್ತಾರೆ. (ಕೆ.ಎಸ್, ಎಸ್.ಎಂ)

Leave a Reply

comments

Related Articles

error: