ದೇಶಪ್ರಮುಖ ಸುದ್ದಿ

ಸೇನಾ ಹೆಲಿಕಾಪ್ಟರ್ ಭೀಕರ  ಅಪಘಾತ :  ಸಿಡಿಎಸ್ ಜನರಲ್ ಬಿಪಿನ್ ರಾವತ್ ಪತ್ನಿ ಸೇರಿ 11 ಮಂದಿ ದುರ್ಮರಣ

ದೇಶ(ತಮಿಳುನಾಡು),ಡಿ.8 : ಇಂದು ತಮಿಳುನಾಡಿನ ಕುನೂರ್ ಬಳಿ mi-17v5 ಸೇನಾ ಹೆಲಿಕಾಪ್ಟರ್ ಭೀಕರ  ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ  ಸಿಡಿಎಸ್ ಜನರಲ್ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 11 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ ಇದರಲ್ಲಿ 14 ಜನ ಇದ್ದರು ಎಂದು ಮೂಲಗಳು ತಿಳಿಸಿವೆ.  ಅದರಲ್ಲೀಗ 11 ಮಂದಿಯ ಮೃತದೇಹ ಪತ್ತೆಯಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದರೂ, ಇನ್ನೂ ಮೃತರು ಯಾರ್ಯಾರು ? ಗಾಯಗೊಂಡವರು ಯಾರು? ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ.

ಅದರಲ್ಲೂ ಈಗ ಸಿಡಿಎಸ್ ಜನರಲ್ ಬಿಪಿನ್ ರಾವತ್ ರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಬೇಕಿದೆ.  ಮೂಲಗಳ ಪ್ರಕಾರ ಬಿಪಿನ್ ರಾವತ್ ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರನ್ನು ವೆಲ್ಲಿಂಗ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ವಿಮಾನ ಪತನವಾಗಿದ್ದು ನೀಲಗಿರಿ ಬೆಟ್ಟ ಪ್ರದೇಶದಲ್ಲಿ ಆಗಿದ್ದರಿಂದ ರಕ್ಷಣಾ ಕಾರ್ಯಾಚರಣೆಯೂ ತುಸು ತೊಡಕಾಗಿದೆ. ಸ್ಥಳೀಯರ ಸಹಾಯದಿಂದ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಮತ್ತು ಮೃತರನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಗೆ ಕಳಿಹಿಸಲಾಗಿದೆ, ತಮಿಳುನಾಡು ಸರ್ಕಾರದ ಉನ್ನತ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಕೂಡ ಅಪಘಾತವಾದ ಸ್ಥಳಕ್ಕೆ ಧಾವಿಸಿದ್ದಾರೆ.  ಈ ಹೆಲಿಕಾಪ್ಟರ್ ದೆಹಲಿಯಿಂದ ಸುಲುರ್ಗೆ ಹೊರಟಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಮಿಲಿಟರಿ ವಿಮಾನ ಪತನದ ಬಗ್ಗೆ ತಿಳಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಆಗಮಿಸಿದ್ದಾರೆ.(ಕೆ.ಎಸ್, ಎಸ್.ಎಂ)

Leave a Reply

comments

Related Articles

error: