ಕರ್ನಾಟಕಪ್ರಮುಖ ಸುದ್ದಿ

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ವಿಮಾನ ಪತನ : ಸಿಎಂ ವಿಷಾದ

ರಾಜ್ಯ(ಬೆಂಗಳೂರು),ಡಿ.8 : -ಸೇನಾ ಮುಖ್ಯಸರಾದ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿದೆ ಅಂದರೆ ನಮಗೆಲ್ಲ ದಿಗ್ಭ್ರಮೆಯಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಸೇನಾ ಹೆಲಿಕಾಪ್ಟರ್ ನಲ್ಲಿ, ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಪ್ರಯಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿರುವುದರ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿ,  ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನವೇ ಅಪಘಾತಕ್ಕೀಡಾಗಿರುವುದು ನಮಗೆಲ್ಲ ದಿಗ್ಭ್ರಮೆ ಮೂಡಿಸಿದೆ , ಇದರ ಬಗ್ಗೆ ಪೂರ್ಣ ವಿವರಗಳನ್ನು ನಾವು ಪಡೆದುಕೊಳ್ಳತ್ತಿದ್ದೇವೆ, ಪತನವಾದ ಸ್ಥಳದಲ್ಲಿ ಶೋಧನೆ ನಡೆಯುತ್ತಿದೆ. ಇದು ದೇಶಕ್ಕೆ ಅತೀ ದೊಡ್ಡ ವಿಷಾದದ ಸುದ್ದಿಯಾಗಿದೆ ಎಂದಿದ್ದಾರೆ. (ಜಿ.ಕೆ, ಎಸ್.ಎಂ)

Leave a Reply

comments

Related Articles

error: