ದೇಶಪ್ರಮುಖ ಸುದ್ದಿ

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿಕೆ

ದೇಶ(ತಮಿಳುನಾಡು),ಡಿ.8 : -ತಮಿಳುನಾಡಿನ ಕುನೂರ್ ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿಕೆಯಾಗಿದ್ದು, ನೀಲಗಿರಿ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಅಲ್ಲಿದ್ದ ಸ್ಥಳೀಯ ನಿವಾಸಿಗಳಿಗೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು, ಅಪಘಾತಕ್ಕೀಡಾಗಿರುವ ಪ್ರದೇಶ ಎಸ್ಟೇಟ್ ಆಗಿದೆ, ಹಾಗಾಗಿ ಅಲ್ಲಿ ಕೆಲವು ಮನೆಗಳೂ ಇದ್ದವು. ಸದ್ಯ ಮೃತದೇಹಗಳ ಪತ್ತೆ ಕಾರ್ಯ ನಡೆಯುತ್ತಿದೆ.  ಹೆಲಿಕಾಪ್ಟರ್ ಪತನವಾಗುತ್ತಿದ್ದಂತೆ ಅತ್ಯಂತ ದೊಡ್ಡ ಶಬ್ದ ಕೇಳಿತು ಎಂದು ಸ್ಥಳೀಯರು ಹೇಳಿದ್ದಾರೆ, ಅಲ್ಲದೆ ಹೊತ್ತಿ ಉರಿದ ಬೆಂಕಿಯನ್ನು ಆರಿಸಲು ಕೂಡ ಅವರು ಪ್ರಯತ್ನಪಟ್ಟಿದ್ದಾರೆ.

ಭಾರತದ  ಸೇನಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ತಮ್ಮ ಪತ್ನಿ ಹಾಗೂ ಇತರ ಸೇನಾ ಅಧಿಕಾರಿಗಳೊಟ್ಟಿಗೆ ದೆಹಲಿಯಿಂದ ತಮಿಳುನಾಡಿನ ಸುಲೂರ್ ನ ವೆಲ್ಲಿಂಗ್ಟನ್ ಗೆ ಉಪನ್ಯಾಸ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಇದಾಗಿತ್ತು. ಸದ್ಯ ಬಂದಿರುವ ಮಾಹಿತಿಯ ಪ್ರಕಾರ ದುರಂತದಲ್ಲಿ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಕೂಡ ಮೃತಪಟ್ಟಿದ್ದಾರೆ. ಮೂವರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅವರು ಯಾರೆಂಬ ನಿಖರವಾದ ಮಾಹಿತಿ ಇಲ್ಲವಾಗಿದೆ.

ತಮಿಳುನಾಡಿನ ಅರಣ್ಯ ಸಚಿವ ರಾಮಚಂದ್ರನ್ ಸ್ಥಳಕ್ಕೆ ಭೇಟಿ ನೀಡಿ , ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಸೇನಾ ಹೆಲಿಕಾಪ್ಟರ್ ನಲ್ಲಿ 16 ಜನರಿದ್ದರು ಎಂದು ನನಗೆ ಮಾಹಿತಿ ಲಭಿಸಿದೆ. ಈ ಹೆಲಿಕಾಪ್ಟರ್ ಮನೆಗಳಿದ್ದ ಜಾಗದಲ್ಲೇ ಪತನಗೊಂಡಿದ್ದರಿಂದ ಇಲ್ಲಿನ ಜನರೂ ಅಪಾಯಕ್ಕೀಡಾಗಿದ್ದಾರೆ ಎಂದಿದ್ದಾರೆ. ಹಾಗೇ ಗಾಯಗೊಂಡವರಿಗೆ ವೈದ್ಯಕೀಯ ಸೇವೆಯನ್ನು ಸರಿಯಾಗಿ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸಾಲ್ಟಿನ್ ಆಡಳಿತಕ್ಕೆ ಸೂಚಿಸಿದ್ದಾರೆ, ಐಎಎಫ್ ಮುಖ್ಯಸ್ಥ ವಿವೇಕ್ ಚೌಧರಿ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.(ಏಜೆನ್ಸಿಸ್, ಎಸ್.ಎಂ)

Leave a Reply

comments

Related Articles

error: