ಮೈಸೂರು

ಪಿಂಜರಾಪೋಲ್ ಗೋಶಾಲೆಗೆ ದೇಣಿಗೆ ನೀಡಿದ ಜೀವಧಾರ ಚಾರಿಟೇಬಲ್ ಟ್ರಸ್ಟ್

ಮೈಸೂರು, ಡಿ.8:- ಜೀವಧಾರ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಿಂಜರಾಪೋಲ್ ಗೋಶಾಲೆಗೆ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಗೋವುಗಳ ಸೇವೆಗೆ 30000ರೂ ದೇಣಿಗೆ ಯನ್ನು ನೀಡುವ ಮೂಲಕ ಪುನೀತ್ ರಾಜ್ ಅವರನ್ನು ಅರ್ಥಪೂರ್ಣವಾಗಿ ಸ್ಮರಿಸಲಾಯಿತು.
ಈಗಾಗಲೇ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ನೇತ್ರದಾನ ,ರಕ್ತದಾನ ,ಅನ್ನಸಂತರ್ಪಣೆ ,ಸೇರಿದಂತೆ ಏನೆಲ್ಲ ಸೇವಾ ಕಾರ್ಯಗಳನ್ನು ಪುನೀತ್ ಅಭಿಮಾನಿಗಳು ಮಾಡಿದ್ದರೋ ಅದೇ ರೀತಿ ಗೋಶಾಲೆಗೆ ನಗದನ್ನು ನೀಡುವ ಮೂಲಕ ವಿಭಿನ್ನ ಕಾರ್ಯಕ್ರಮ ಮುಂದುವರೆಸಿದ ಅಭಿಮಾನಿಗಳು
ನಂತರ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಿತ್ರನಟ ಪುನೀತ್‌ ರಾಜ್‌ಕುಮಾರ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಪುನೀತ್‌ ರಾಜ್‌ಕುಮಾರ ನಿಧನದ ನಂತರ ಅವರು ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು ತಿಳಿದುಬಂದಿವೆ. ಅನಾಥಶ್ರಮ, ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯ ಮಾಡುತ್ತಿದ್ದರು. ಅಂಥವರನ್ನು ಕಳೆದುಕೊಂಡಿದ್ದು, ರಾಜ್ಯಕ್ಕೆ ತುಂಬಾ ನಷ್ಟವಾಗಿದೆ ಎಂದು ಸ್ಮರಿಸಿದರು.
ಅಪ್ಪು ಮಾದರಿಯಲ್ಲಿ ದೇಹದಾನ ಮಾಡಲು ಯುವಕರು ಮುಂದಾಗಿ , ಮರಣ ನಂತರವೂ ತಮ್ಮ ದೇಹದ ಅಂಗಾಂಗಳನ್ನು ದಾನ ಮಾಡಬಹುದು. ನೇತ್ರದಾನ ಮಾಡುವುದರಿಂದ ಅಪ್ಪು ಸಣ್ಣ ವಯಸ್ಸಿನಲ್ಲಿಯೇ ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಇವರ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಅಪ್ಪು ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಯಾಗಿದ್ದರು. ಯುವ ಪಡೆ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಂದಿನ ಸಾಮಾಜಿಕ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುತ್ತಣ್ಣ ,ಮುಡಾ ಸದಸ್ಯೆ ಲಕ್ಷ್ಮಿದೇವಿ ,
ದೇವೇಂದ್ರ ಪರಿಹಾರಿಯಾ, ಕರ್ಮರಾಮ್ ಸೀರ್ವಿ,
ಗುದಡ್ ರಾಮ್ ಕಾಗ್, ಪೃಥ್ವಿ ಸಿಂಗ್ ಚಾಂದವತ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: