ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯ ನಕಲಿ ಜಾತ್ಯತೀತ ಶೂರ ; ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ(ಬೆಂಗಳೂರು),ಡಿ.9 : – ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಭಯ ಕಾಡುತ್ತಿದೆ, ಚುನಾವಣೆ ಬಂದರೆ ಜೆಡಿಎಸ್ ಚಳಿ,ಜ್ವರ ಶುರುವಾಗುತ್ತದೆ ಎಂದು ಜೆಡಿಎಸ್  ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯಅವರನ್ನುದ್ದೇಶಿಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು ‘ಚಳಿ,ಜ್ವರ ಬಿಡಿಸಿಕೊಳ್ಳಲು ಅವರು ಜೆಡಿಎಸ್ ಕುಟುಂಬ ರಾಜಕಾರಣ(ಜೆಡಿಎಫ್) ಎಂಬ ಹೊಸ ಔಷಧಿ ಬಳಸುತ್ತಿದ್ದಾರೆ. ಅದು ಅವರನ್ನು ಉಳಿಸುವ ಟಾನಿಕ್ . ಹಾಗಾದರೆ ಅವರದ್ದು ಎಸ್ ಸಿಎಫ್ (ಸಿದ್ದ ಸೂತ್ರ ಕಾಂಗ್ರೆಸ್ ಫ್ಯಾಮಿಲಿ) ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ಸ್ಲೋಗನ್ ಗಳ ಸೃಷ್ಠಿಕರ್ತರಾದ ಅವರು ಮಂಡ್ಯದಲ್ಲಿ ಜಾತ್ಯತೀತ ತತ್ವ, ಆದರ್ಶಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ಜಾತಿ ಸಹಕಾರಕ್ಕೆ ಮೊರೆ ಹೋಗಿದ್ದಾರೆ. ಮೈಸೂರಿನಲ್ಲಿ ಎರಡನೇ ಪ್ರಶಾಸ್ತ್ಯದ ಮತಗಳನ್ನು ಬಿಜೆಪಿಗೇ ಹಾಕಿಸಲು ಹೊರಟಿದ್ದಾರೆ. ಅದಕ್ಕಾಗಿ ಜಾತ್ಯತೀತ ಜಗಜಟ್ಟಿ ‘ಸಂದೇಶ ಸನ್ನಿಧಿ’ಯಲ್ಲಿ ಕುಳಿತು ಫರ್ಮಾನು  ಹೊರಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ ಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯತೀತ ಶೂರ ಅಸಲಿ ರೂಪ ಕಳಚಿದೆ. ಮಂಡ್ಯದಲ್ಲಿ ಸಮುದಾಯದ ಹೆಸರಿನಲ್ಲೇ ಮತ ಯಾಚನೆ ನಡೆಯುತ್ತಿದೆ. ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಟೀಕಿಸುವವರೇ ಈಗ ಸಹಕಾರ ಸಚಿವರ ಸಹಾಯಕನನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇದು ಯಾರ ಲೆಕ್ಕಚುಕ್ತಾ ಮಾಡಲು.? ಯಾವ ಒಳ ಒಪ್ಪಂದವಿದು.? ಎಂದು ಕುಮಾರಸ್ವಾಮಿ ಕೇಳಿದ್ದಾರೆ.(ಏಜೆನ್ಸಿಸ್, ಎಸ್.ಎಂ)

Leave a Reply

comments

Related Articles

error: