ನಮ್ಮೂರುಮೈಸೂರು

ಇಂದು ಸುಬ್ರಹ್ಮಣ್ಯ ಷಷ್ಠಿ : ಸಿದ್ದಲಿಂಗಪುರದಲ್ಲಿ ವಿಶೇಷ ಪೂಜೆ

ಮೈಸೂರು,ಡಿ.9 :-  ಇಂದು ಸುಬ್ರಮಣ್ಯ ಷಷ್ಠಿ  (ಚಂಪಾ ಷಷ್ಠಿ) ಪ್ರಯುಕ್ತ ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರ ಗ್ರಾಮದಲ್ಲಿ ಇರುವ  ಸುಬ್ರಮಣ್ಯೇಶ್ವರ ಸ್ವಾಮಿಯ ದೇವಾಲಯದಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ಪೂಜೆ ಆರಂಭವಾಗಿದೆ.

ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಮಣ್ಯ ಅವರ ನೇತೃತ್ವದಲ್ಲಿ ಪೂಜಾದಿ ಅನುಷ್ಠಾನಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಂದು ಷಷ್ಠಿಯ ಪ್ರಯುಕ್ತ ಬೆಳಗಿನ ಜಾವ 5 ಗಂಟೆಯಿಂದಲೇ ದೇವರಿಗೆ ರುದ್ರಾಭಿಷೇಕ, ಸಹಸ್ರನಾಮವಾಳಿ, ಮುಂತಾದ ಅಭಿಷೇಕಗಳನ್ನು ಮಾಡಿದ್ದೇವೆ, ದೇವರಿಗೆ ನಾಗಾಭರಣ ಬರುವುದು ಮೈಸೂರು ಅರಮನೆಯ ರಾಜವಂಶಸ್ಥ ರಿಂದ, ಆದ್ದರಿಂದ ನಾವು ಮೊದಲ ಪೂಜೆಯನ್ನು ಶ್ರೀಕಂಠದತ್ತ ಒಡೆಯರ ಹೆಸರಿನಲ್ಲಿ ಮಾಡಿ  ಎಲ್ಲ ಪ್ರಜೆಗಳಿಗೂ ಒಳ್ಳೆಯದು ಆಗಲಿ, ಈ ಪ್ರಪಂಚದಿಂದ ಕೊರೊನಾ ಎನ್ನುವ ರೋಗ ಹೋಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

ಮೊದಲೆಲ್ಲ ದೇವಸ್ಥಾನದಲ್ಲಿ ಷಷ್ಠಿಯ ದಿನದಂದು ರಥೋತ್ಸವ ನಡೆಯುತ್ತಿತ್ತು. ಆದರೆ ಈ ಬಾರಿ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶವನ್ನು ಮಾಡಿದೆ. ಪ್ರತಿ ವರ್ಷದಂತೆ ದೇವರಿಗೆ ಎಲ್ಲ ರೀತಿಯ ಅಲಂಕಾರವನ್ನು ಮಾಡಿದ್ದೇವೆ, ಆದರೆ ಕೊರೊನಾದ ಭಯದಿಂದ  ಜನರಿಗೆ ದೇವರ ದರ್ಶನದ ಅವಕಾಶವಿಲ್ಲದಿರುವುದೇ ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು. (ಕೆ.ಎಸ್, ಎಸ್.ಎಂ)

Leave a Reply

comments

Related Articles

error: