ನಮ್ಮೂರುಮೈಸೂರು

ವಾಹನ ಪಾರ್ಕಿಂಗ್ ವಿಷಯಕ್ಕೆ ಖಾಸಗಿ ವಾಹಿನಿ ಕ್ಯಾಮೆರಾ ಮನ್ ಮೇಲೆ ಪೊಲೀಸ್ ನಿಂದ ಹಲ್ಲೆ

ಮೈಸೂರು,ಡಿ.9 :  – ಇಂದು ಬೆಳಿಗ್ಗೆ  ಸಿದ್ದಲಿಂಗಪುರ ಗ್ರಾಮದ ಸುಬ್ರಮಣ್ಯೇಶ್ವರ ದೇವಸ್ಥಾನದ ವರದಿ ಮಾಡಲು ಹೋದ ಖಾಸಗಿ ವಾಹಿನಿಯ ಕ್ಯಾಮರ ಮ್ಯಾನ್  ಮೇಲೆ ಪೊಲೀಸ್ ಓರ್ವರು ಹಲ್ಲೆ ಮಾಡಿರುವ ಘಟನೆ  ನಡೆದಿದೆ,

ಇಂದು ಸುಬ್ರಮಣ್ಯ ಷಷ್ಠಿ  (ಚಂಪಾ ಷಷ್ಠಿ) ಪ್ರಯುಕ್ತ ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರ ಗ್ರಾಮದಲ್ಲಿ ಇರುವ  ಸುಬ್ರಮಣ್ಯೇಶ್ವರ ಸ್ವಾಮಿಯ ದೇವಾಲಯದಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ಪೂಜೆ ಆರಂಭಗೊಂಡಿದ್ದು, ದೇವಸ್ಥಾನದ ಪೂಜೆ ಮತ್ತು ಆಚರಣೆಯನ್ನು ವರದಿ ಮಾಡಲು ಹೋಗಿದ್ದ ಖಾಸಗಿ ವಾಹಿನಿಯ ಕ್ಯಾಮರ ಮನ್ ಸತೀಶ್ ಮತ್ತು ದೇವಸ್ಥಾನದಲ್ಲಿ ಇದ್ದ ಪೊಲೀಸ್ ಲೋಕೇಶ್ ಇಬ್ಬರ ನಡುವೆ ವಾಹನ ಪಾರ್ಕಿಂಗ್ ವಿಷಯಕ್ಕೆ  ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸ್ ಕ್ಯಾಮರಾ ಮನ್ ಮೇಲೆ ಹಲ್ಲೆ ಮಾಡಿ  ಲಾಠಿಯಲ್ಲಿ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಾದ ಬಳಿಕ ಕ್ಯಾಮರ ಮನ್ ಸತೀಶ್ , ಮೈಸೂರು ಡಿಸಿಪಿ ಪ್ರದೀಪ್ ಗುಂಟಿ ಅವರಿಗೆ ತನ್ನ ಮೇಲೆ ಹಲ್ಲೆ ಆಗಿರುವುದರ ಬಗ್ಗೆ ತಿಳಿಸಿದ್ದಾರೆ.

ನಂತರ ಗಾಯಗೊಂಡಿದ್ದ ಸತೀಶ್ ಅವರಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.   ಘಟನೆ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವ ದಾಖಲಾಗಿದೆ. (ಕೆ.ಎಸ್, ಎಸ್.ಎಂ)

Leave a Reply

comments

Related Articles

error: