ಕರ್ನಾಟಕಪ್ರಮುಖ ಸುದ್ದಿಮೈಸೂರು

ಪರಿಷತ್ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ : ವಾಟಾಳ್ ನಾಗರಾಜ್ ಆರೋಪ

ಮೈಸೂರು,ಡಿ.9:- ಪರಿಷತ್ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕನ್ನಡಪರ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನಾಗರಾಜ್  ಚುನಾವಣೆ ಆಯೋಗ ಮಲಗಿದೆ ಎಂದು ಮಲಗಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಚುನಾವಣೆ ಹಣದ ಹೊಳೆ ಹರಿಯುತ್ತಿದೆ. ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದರೂ ಚುನಾವಣಾ ಆಯೋಗ ಮಲಗಿದೆ. ಚುನಾವಣ ಆಯೋಗದ ನೀತಿಯನ್ನು ಖಂಡಿಸುತ್ತೇನೆ. ರಾಜಕೀಯ ಪಕ್ಷದವರು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಇದು ನಿಲ್ಲದೆ ಹೋದರೆ ಪ್ರಜಾಪ್ರಭುತ್ವ ಉಳಿಯುವುದು ಹೇಗೆ. ಇದು ನಿಲ್ಲಬೇಕು. ಇದಕ್ಕೆಲ್ಲ ಕಡಿವಾಣ ಹಾಕಲು ಹೊಸ ಚುನಾವಣಾ ಕಾಯ್ದೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಬಿಪಿನ್ ರಾವತ್ ದುರ್ಮರಣಕ್ಕೆ ಸಂತಾಪ ಸೂಚಿಸಿದ ವಾಟಾಳ್ ನಾಗರಾಜ್. ಬಿಪಿನ್ ರಾವತ್ ಒಬ್ಬ ಅಪ್ರತಿಮ ದೇಶಪ್ರೇಮಿ. ಅವರ ಸಾವು ಇಡೀ ದೇಶಕ್ಕೆ ತುಂಬಲಾರದ ನಷ್ಟ. ಅವರ ಸಾವು ಇಡೀ ದೇಶಕ್ಕೆ ನೋವುಂಟುಮಾಡಿದೆ. ಅವರ ಸಾವಿನ ವಿಚಾರ ಸಮಗ್ರ ತನಿಖೆ ಆಗಬೇಕು. ತನಿಖೆ ನಡೆದರೆ ವಿಚಾರ ಏನು ಅಂತ ತಿಳಿಯಲಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: