ನಮ್ಮೂರುಮೈಸೂರು

ಹಾಡಿಯ ನಿವಾಸಿ ಮೇಲೆ ಗುಂಡು ಹಾರಿಸಿದ ಪ್ರಕರಣ: ನಾಲ್ವರು ಅರಣ್ಯ ಸಿಬ್ಬಂದಿ ಗಳ ಬಂಧನಕ್ಕೆ ಒತ್ತಾಯ

ಮೈಸೂರು,ಡಿ.9 : ಪಿರಿಯಾಪಟ್ಟಣ ತಾಲ್ಲೂಕು ರಾಣಿಗೇಟ್ ಹಾಡಿಯ ಜೇನುಕುರುಬನ ಮೇಲೆ ಗುಂಡು ಹೊಡೆದು ಕೊಲೆ ಪ್ರಯತ್ನ ಮಾಡಿರುವ ಅರಣ್ಯ ಸಿಬ್ಬಂದಿಗಳನ್ನು ಬಂಧಿಸುವಂತೆ, ಕರ್ನಾಟಕ ದಲಿತ ಚಳುವಳಿ ನಿರ್ಮಾಣ ವೇದಿಕೆ ಒತ್ತಾಯಿಸಿದೆ.

ಇಂದು ಮೈಸೂರು  ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ವೇದಿಕೆಯ ಮುಖಂಡ ಹೆಚ್.ಡಿ ರಮೇಶ್, ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್ ಹಾಡಿಯ ಜೇನುಕುರುಬ ಬಸವ ಎಂಬುವವನ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ವಾಚರ್ ಸುಬ್ರಮಣಿ, ವಾಚರ್ ಸಿದ್ದ, ವಾಚರ್ ಮಹೇಶ್, ಗಾರ್ಡ್ ಮಂಜುನಾಥ್ ಈ ನಾಲ್ಕು ಜನರು ಸುಮ್ಮನೆ ಗುಂಡು ಹಾರಿಸಿ ದಾಳಿ ನಡೆಸಿ ಕೊಲೆಯನ್ನು ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಕೊಲೆ ಮಾಡಲು ಪ್ರಯತ್ನ ಮಾಡಿರುವ ಈ ನಾಲ್ಕು ಜನರ ಅರಣ್ಯ ಸಿಬ್ಬಂದಿಗಳನ್ನು ಎಸ್.ಸಿ, ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಹಾಗೂ ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿ ಕೂಡಲೇ ಅವರನ್ನು ಬಂಧಿಸ ಬೇಕು ಎಂದು ಆಗ್ರಹಿಸಿದರು.

ಕೆ.ಆರ್. ಆಸ್ಪತ್ರೆಯಲ್ಲಿ ಸಾವು ಬದುಕಿನ ಜೊತೆ ಹೋರಾಡುತ್ತಿರುವ ಬಸವನ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ ನೀಡಬೇಕು , ಬಸವನ ಕುಟುಂಬಕ್ಕೆ ಜೀವನ ನಿರ್ವಹಣೆಗೆ, ಅರಣ್ಯ ಇಲಾಖೆಯಲ್ಲಿ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಬಸವನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಹಾಗೂ ಆ ನಾಲ್ವರು ಸಿಬ್ಬಂದಿಗಳನ್ನು ಕೂಡಲೇ ಬಂಧಿಸಬೇಕು , ಇಲ್ಲವಾದಲ್ಲಿ ಅರಣ್ಯ ಇಲಾಖೆಯ ವಿರುದ್ಧ ವೇದಿಕೆ ಉಗ್ರ ಹೋರಾಟವನ್ನು ಮಾಡಲಿದೆ ಎಂದು ಎಚ್ಚರಿಕೆಯನ್ನು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಂಗವಾದಿ ನಾರಾಯಣಪ್ಪ, ದರ್ಶನ್ ಉಪಸ್ಥಿತರಿದ್ದರು. (ಕೆ.ಎಸ್, ಎಸ್.ಎಂ)

Leave a Reply

comments

Related Articles

error: