ನಮ್ಮೂರುಮೈಸೂರು

ಸ್ವಾವಲಂಬಿ ಮಹಿಳೆಯರಿಗಾಗಿ ‘ನಮ್ಮ ಊರು ನಮ್ಮ ರುಚಿ’ ಕಾರ್ಯಕ್ರಮ

ಮೈಸೂರು,ಡಿ.9 : –  ಕೊರೊನಾದಿಂದ ಸಂಕಷ್ಟ ಎದುರಿಸುತ್ತಿರುವ ಸ್ವಾವಲಂಬಿ ಮಹಿಳೆಯರಿಗೆ ಉತ್ತೇಜನ ನೀಡಲು ಜನ ಸ್ಪಂದನಾ ಟ್ರಸ್ಟ್ ವತಿಯಿಂದ ‘ನಮ್ಮ ಊರು ನಮ್ಮ ರುಚಿ’  ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂದು ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಜನಸ್ಪಂದನಾ ಟ್ರಸ್ಟ್ ನ ಸದಸ್ಯೆ ಶೋಭ ಸುನೀಲ್ ಮಾತನಾಡಿ ಕೊರೊನಾ ಎಂಬ ವೈರಾಣುವಿನಿಂದ ಎಲ್ಲರ ಬದುಕು ಅಸ್ತವ್ಯಸ್ತವಾಗಿದ್ದು, ಹಾಗೆಯೇ ಗುಡಿ ಕೈಗಾರಿಕೆ ಹಾಗೂ ಗೃಹ ಕೈಗಾರಿಕೆ ಅವನತ್ತಿಯತ್ತ ತಲುಪುತ್ತಿದ್ದು, ಅಸಂಘಟಿತ ಮತ್ತು ಸ್ವಾವಲಂಬಿ ಮಹಿಳೆಯರಿಗೆ ಉತ್ತೇಜನ ನೀಡಲು , ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ‘ನಮ್ಮ ಊರು ನಮ್ಮ ರುಚಿ’ ಎಂಬ ಶೀರ್ಷೀಕೆಯಡಿ ಸಿದ್ದ ಆಹಾರ ಪದಾರ್ಥಗಳ ಮಾರಾಟ ಮೇಳವನ್ನು ಡಿ.17,18,19 ರಂದು ಚಿಕ್ಕಮ್ಮಾನಿಕೇತನ ಕಮ್ಯೂನಿಟಿ ಹಾಲ್ ನಲ್ಲಿ ಆಯೋಜಿಸಲಾಗಿದೆ  ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ 8618442164, 944886214 ಅನ್ನು ಸಂಪರ್ಕಿಸ ಬಹುದು ಎಂದು ತಿಳಿಸಿದರು. (ಕೆ.ಎಸ್, ಎಸ್.ಎಂ)

Leave a Reply

comments

Related Articles

error: