ಮೈಸೂರು

ಡಿ.ಫಾರ್ಮಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮೈಸೂರು,ಡಿ.9:- ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿ ಐಸಿಸಿವತಿಯಿಂದ 2021-22ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಮತ್ತು ಕರ್ನಾಟಕದ ಖಾಸಗಿ ಡಿ.ಫಾರ್ಮಸಿ ವಿದ್ಯಾಸಂಸ್ಥೆಗಳಲ್ಲಿರುವ ಸರ್ಕಾರಿ ಕೋಟದಡಿಯಲ್ಲಿ ಪ್ರಥಮ ಡಿ.ಫಾರ್ಮ್ ಕೋರ್ಸಿನ ಸೀಟುಗಳ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಪರೀಕ್ಷಾ ಪ್ರಾಧಿಕಾರ ಮಂಡಳಿಯ ವೆಬ್‌ ಸೈಟ್‌ನ (www.beadpharmacy.org) ಮೂಲಕವೇ ಸಲ್ಲಿಸಬೇಕು. ನೇರ ಅಥವಾ ಅಂಚೆ ಮೂಲಕ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿಗಳನ್ನು ಸಲ್ಲಿಸುವ ಅವಧಿ ದಿನಾಂಕ 10.12.2021 ರಿಂದ 21.12.2021ರ ಮಧ್ಯರಾತ್ರಿ 1200ರವರೆಗೆ ಇರುತ್ತದೆ. ಮೇಲೆ ತಿಳಿಸಿರುವ ವೆಬ್ ಸೈಟ್ ಮೂಲಕ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಸೀಟು ಹಂಚಿಕೆಯ ಪ್ರಕ್ರಿಯೆಯ ದಿನಾಂಕ ಮತ್ತು ಸಮಯಗಳನ್ನು ಮೇಲ್ಕಾಣಿಸಿದ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುವುದು.

ವಿದ್ಯಾರ್ಹತೆ:- ದ್ವಿತೀಯ ಪಿ ಯು ಸಿ (PCM/PCB) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ: 1. 080-22483465 /080-22222681 ಸಂಪರ್ಕಿಸಬಹುದು.

 

Leave a Reply

comments

Related Articles

error: