ಮೈಸೂರು

ಹೆಣ್ಣು ಎಂಬ ಶಬ್ದದಲ್ಲಿ ಅನನ್ಯ ಶಕ್ತಿಯಿದೆ : ಡಾ. ಪಿ. ಬೆಟ್ಟೇಗೌಡ

ಮೈಸೂರು,ಡಿ.9:- ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು “ಸ್ನೇಹ ಸಿಂಚನ ಮತ್ತು ವಿದ್ಯಾರ್ಥಿಗಳ ಪ್ರತಿನಿಧಿಗಳ ಪದಗ್ರಹಣ ಸಮಾರಂಭ”ವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಉದ್ಘಾಟಿಸಿದ ಡಾ. ಪಿ. ಬೆಟ್ಟೇಗೌಡ ಅವರು ಮಾತನಾಡಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಸ್ಥಾಪಿತವಾದ ಸಂಸ್ಥೆಯೇ ಶ್ರೀ ನಟರಾಜ ಪ್ರತಿಷ್ಠಾನ, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಬಲವರ್ಧನೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವಿದ್ಯಾ ಸಂಸ್ಥೆಯಾಗಿದೆ. ಡಾ. ಜಿ.ಎಸ್. ಶಿವರುದ್ರಪ್ಪನವರ ಹಣತೆ, ಪದ್ಯ ಬಹಳ ಶ್ರೇಷ್ಠವಾದ ಪದ್ಯವಾಗಿದೆ. ಬುದ್ಧ, ಬಸವಣ್ಣ, ವ್ಯಾಸ, ಐನ್‍ಸ್ಟೀನ್ ಜ್ಞಾನವೆಂಬ ದೀಪವನ್ನು ಹಚ್ಚಿದರು. ನಿರ್ಮಲವಾದ ಮನಸ್ಸಿನಿಂದ ಕೆಲಸ ಮಾಡಿದರೆ ಅಲ್ಲಿ ಕತ್ತಲೆಯ ಬದಲಿಗೆ ಬೆಳಕು ಎಲ್ಲೆಲ್ಲಿಯೂ ಹರಡುತ್ತದೆ. ಹೆಣ್ಣು ಮಕ್ಕಳು ಸದಾ ಎಚ್ಚರಿಕೆಯಿಂದಿರಬೇಕು. ನಮ್ಮ ನಡವಳಿಕೆಯ ಮೆಲೆ ನಮಗೆ ಹೆಚ್ಚಿನ ಗಮನವಿರಬೇಕು ಎಂದು ತಿಳಿಸಿದರು.
ಹೆಣ್ಣು ಎಂಬ ಶಬ್ದದಲ್ಲಿ ಆತ್ಮಶಕ್ತಿಯಿದೆ. ಹೆಣ್ಣುತನ ಎನ್ನುವುದು ಒಂದು ಅನನ್ಯವಾದ ಶಕ್ತಿ. ಹೆಣ್ಣು ಗಂಡಿಗೆ ಸರಿಸಮಾನವಾಗಿ ನಿಲ್ಲಬಲ್ಲರು. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಗೊಂದಲವಿರಬಾರದು. ಜೀವನದಲ್ಲಿ ಗೆಲುವನ್ನು ಸಾಧಿಸಲು ಪ್ರಯತ್ನ ಮತ್ತು ಅದೃಷ್ಟ ಎರಡೂ ಇರಬೇಕು. ಇವೆರಡು ಮುಖದ ಎರಡು ಕಣ್ಣುಗಳಿದ್ದಂತೆ. ಕಲಿಕೆಯ ಉದ್ದೇಶ ವಿಶಾಲವಾದುದು. ಬದುಕು ಕೊಟ್ಟ ನಮ್ಮ ತಂದೆ-ತಾಯಿಯೇ ನಮ್ಮ ಪಾಲಿನ ನಿಜವಾದ ನಾಯಕ-ನಾಯಕಿ ಸ್ನೇಹವೆಂಬುದು ಪವಿತ್ರವಾದ ಒಂದು ಬಾಂಧವ್ಯವೆಂದು ವಿವರಿಸಿದರು.
ಬಿ.ಕಾಂ.-ಬಿ.ಎ. ತರಗತಿಯಲ್ಲಿ ಆಯ್ಕೆಯಾದ ತರಗತಿ ಪ್ರತಿನಿಧಿಗಳಿಗೆ ಅತಿತಿಗಳು ಬ್ಯಾಡ್ಜ್ ನೀಡಿ ಪದಗ್ರಹಣ ನೀಡಿದರು. ಪ್ರಥಮ ವರ್ಷದ ಬಿ.ಎ./ಬಿ.ಕಾಂ ವಿದ್ಯಾರ್ತಿನಿಯರಿಗೆ ಹಣತೆ ಹಚ್ಚಿ ಸಿಹಿ ತಿನಿಸಿ ಸ್ನೇಹ ವಿನಿಮಯ ಮಾಡಿಕೊಂಡು ಸ್ವಾಗತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಎಂ. ಶಾರದ ವಹಿಸಿದ್ದರು.ಉಪ ಪ್ರಾಂಶುಪಾಲರಾದ ಡಾ. ಜಿ. ಪ್ರಸಾದಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಂದನಾ ಪ್ರಾರ್ಥಿಸಿದರೆ, ದಿವ್ಯ ಸ್ವಾಗತಿಸಿದರು. ಸಹನಾ ನಿರೂಪಿಸಿದರು. ನಾಗರತ್ನ ವಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: