ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಬೇಕಾದಷ್ಟು ಗಂಭೀರ ಸ್ಥಿತಿ ಸದ್ಯಕ್ಕೆ ಇಲ್ಲ ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ರಾಜ್ಯ(ಬೆಂಗಳೂರು),ಡಿ.09 : ಕಳೆದ ಎರಡೂ ದಿನಗಳಿಂದ ರಾಜ್ಯದಲ್ಲಿ ಕೊರೊನಾದ ಸೋಂಕಿತರ ಸಂಖ್ಯೆ ಇಳಿಮುಖವಾಗಿರುವುದರಿಂದ ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚುವ ಬಗ್ಗೆ ಇರುವ ಗೊಂದಲಗಳ ಕುರಿತಿ ಸಚಿವ ಬಿ.ಸಿ.ನಾಗೇಶ್ ಮಾಧ್ಯಮಗಳೊಂದಿಗೆ ಮಾತನಾಡಿ ರಾಜ್ಯದ ಜನತೆಗೆ ಸ್ಪಷ್ಟತೆಯನ್ನು ನೀಡಿದ್ದಾರೆ.

ಕಳೆದ ಎರಡೂ ದಿನಗಳಿಂದ ರಾಜ್ಯದಲ್ಲಿ ಕೊರೊನಾದ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ, ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ಮಗುವುಗೂ ಕೊರೊನಾ ಸೋಂಕು ತಗುಲಿಲ್ಲ , ಆದರೆ ನೆನ್ನೆ ಎರಡು ಪಿಯು ಕಾಲೇಜುಗಳ ವಿದ್ಯಾರ್ಥಿಗಳಲ್ಲಿ  ಮಾತ್ರ ಕೊರೊನಾದ ಸೋಂಕು ಧೃಡ ಪಟ್ಟಿದೆ, ಕೊರೊನಾ ಸೋಂಕು ತಗುಲಿದ್ದ ಶಾಲೆಗಳೆಲ್ಲವೂ ಮತ್ತೆ ಈಗ ಪುನರರಂಭವಾಗಿದೆ, ಮಕ್ಕಳ ಸಂಖ್ಯೇಯು ಸಹ ಕಡಿಮೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಕೆಲವು ವಸತಿ ನಿಲಯಗಳಲ್ಲಿ ಕೊರೊನಾ ಸೋಂಕಿ ಸಂಖ್ಯೆ ಹೆಚ್ಚಿದ್ದು, ಡಾ. ಸುದರ್ಶನ್ ಮತ್ತು ಡಾ.ರವಿ ಅವರ ನೇತೃತ್ವದಲ್ಲಿ ಇರುವ ಸಮಿತಿ ಕಳೆದ ಎರಡು ದಿನಗಳಿಂದ ಚರ್ಚೆ ನಡೆಸಿ, ಇವತ್ತು ಶಾಲೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲ ಎಂದು ವಿಧಾನಸೌಧದಲ್ಲಿ ವರದಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಹಾಗಾಗೀ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚವ ಗಂಭೀರವಾದ ಸ್ಥಿತಿ ಏನೂ ಇಲ್ಲ , ಆದರೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಿಂದ ಒಂದು ಜಂಟಿ ಸಮಿತಿಯನ್ನು ಮಾಡಿ, ಆ ಸಮಿತಿಯು ವಿದ್ಯಾರ್ಥಿಗಳ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆಗಳನ್ನು ನಡೆಸಬೇಕು ಎಂದು ತಿಳಿಸಿದ್ದಾರೆ.(ಎಸ್.ಹೆಚ್, ಎಸ್.ಎಂ)

Leave a Reply

comments

Related Articles

error: