ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ವಿಷಯ ತಿಳಿದ 24 ಗಂಟೆಯಲ್ಲಿಯೇ ಆರೋಪಿ ಬಂಧನ

ರಾಜ್ಯ(ಮೈಸೂರು/ಮಂಡ್ಯ),ಡಿ.09 : ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎರಡು ದೇವಸ್ಥಾನಗಳ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ ಆರೋಪದಲ್ಲಿ ಮೈಸೂರು ಜಿಲ್ಲಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಮಂಗಳವಾರ ರಾತ್ರಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎರಡು ದೇಗುಲಗಳ ವಸ್ತುಗಳು ಹಾಗೂ ಮತ್ತೆರಡು ದೇವಾಲಯಗಳ ವಿಗ್ರಹಗಳನ್ನು ಹಾಳು ಮಾಡಿದ ವಿಷಯ ಗೊತ್ತಾದ 24 ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ, ಆರೋಪಿ ಕೆ.ಆರ್ ನಗರ ತಾಲೂಕಿನ ಚಿಕ್ಕಬೇರ್ಯ ಗ್ರಾಮದವನಾಗಿದ್ದು, ಆತನನ್ನು ಕೆ.ಆರ್ ಪೇಟೆಯ ಬೀರವಳ್ಳಿ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನೀಡುರುವ ಮಾಹಿತಿ ಪ್ರಕಾರ , ಆರೋಪಿ ಮೈಸೂರು ಸಾಲಿಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಯ ಎರಡು ದೇವಸಸ್ಥಾನ ಹಾಗೂ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ದೇವಸ್ಥಾನಗಳ ವಿಗ್ರಹಗಳು ಹಾಗೂ ದೇಗುಲಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಾಳು ಮಾಡಿದ್ದ. ನಂತರ ಊರಿನಿಂದ ತಲೆ ಮರೆಸಿಕೊಂಡು ಪರಾರಿಯಾಗಿದ್ದ ಎಂಬುದರ ಬಗ್ಗೆ ದೂರು ದಾಖಲಾಗಿತ್ತು ಎಂದು ತಿಳಿಸಿದ್ದಾರೆ.

ಇದು ಕೋಮುಗಲಭೆಯನ್ನು ಉಂಟುಮಾಡುವಂತಹ ಸೂಕ್ಷ್ಮ ವಿಷಯವಾದ್ದರಿಂದ ಈ ಘಟನೆಯ ತನಿಖೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು, ಆ ತಂಡ ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.(ಎಸ್.ಹೆಚ್, ಎಸ್.ಎಂ)

Leave a Reply

comments

Related Articles

error: