ನಮ್ಮೂರುಮೈಸೂರು

ರೈತರಿಗಾಗಿಯೇ ಬೆಳೆ ಸಮೀಕ್ಷೆ ಆ್ಯಪ್

ಮೈಸೂರು,ಡಿ.10 : –  ರೈತರು ಬೆಳೆದಿರುವ ಬೆಳೆಗಳ ಬಗ್ಗೆ ಸಮಿಕ್ಷೆ ಮಾಡಲು ಕರ್ನಾಟಕ ಸರ್ಕಾರದ ವತಿಯಿಂದ ಹೊಸ ಆ್ಯಪ್ ಯೊಂದು ಬಿಡುಗಡೆಗೊಂಡಿದೆ.

ಕರ್ನಾಟಕ ಸರ್ಕಾರದ ವತಿಯಿಂದ ಬೆಳೆ ಸಮೀಕ್ಷೆ ಕಾರ್ಯಕೈಗೊಳ್ಳಲು ಹೊಸದಾಗಿ ರೈತರ ಬೆಳೆ ಸಮೀಕ್ಷೆ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, ಈ ಆ್ಯಪ್ ಮುಖಾಂತರ ಸ್ವತಃ ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಅಪ್ ಲೋಡ್ ಮಾಡಬಹುದಾಗಿದೆ.

ಈ ಆ್ಯಪ್ ಮುಖಾಂತರ ಸದರಿ ಬೆಳೆ ಸಮೀಕ್ಷೇ ಮಾಹಿತಿಯನ್ನು ಬೆಳೆ ವಿಮೆ ಪರಿಹಾರ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಯೋಜನೆ ಮತ್ತಿ ಸರ್ಕಾರದ ವಿವಿಧ ಯೋಜನೆಗಳಡಿ ರೈತರಿಗೆ ಸವಲತ್ತುಗಳನ್ನು ಒದಗಿಸಲು ಮತ್ತು ಆರ್.ಟಿ.ಸಿ.ಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಬಹುದಾಗಿದೆ ಎಂದು . ಜಂಟಿ ಕೃಷಿ ನಿರ್ದೇಶಕರು ಮೈಸೂರು ಜಿಲ್ಲೆ ಇವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಜಿ.ಕೆ, ಎಸ್.ಎಂ)

Leave a Reply

comments

Related Articles

error: