ನಮ್ಮೂರುಮೈಸೂರು

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ; ಕಾರ್ಯಕ್ರಮದ ಲೈವ್ ವಿಕ್ಷಣೆ

ಮೈಸೂರು,ಡಿ.13 : –  ಇಂದು ಬೆಳಗ್ಗೆ  ಶ್ರೀರಾಂಪುರ 2ನೆ ಹಂತದಲ್ಲಿರುವ ಶಿವ ದೇವಾಲಯದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ಅವರು ಭಕ್ತರೊಂದಿಗೆ ಶಿವ ದೇವಾಲಯದಲ್ಲಿ ಕಾಶೀ ವಿಶ್ವನಾಥ ಕಾರಿಡಾರ್ ನ ಲೈವ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಶಾಸಕರು ಪ್ರಧಾನಿ ನರೇಂದ್ರ ಮೋದಿಯವರು 2019 ರಲ್ಲಿ ಕಾಶಿ ಕ್ಷೇತ್ರ ದಿಂದ ಗೆದ್ದ ನಂತರ ಕಾಶಿಯನ್ನು ಅಭೂತಪೂರ್ವವಾಗಿ ಅಭಿವೃದ್ಧಿ ಮಾಡಿದ್ದಾರೆ. ಕಾಶೀ ಹಿಂದೂಗಳ ಅತ್ಯಂತ ಪವಿತ್ರ ಸ್ಥಳವಾಗಿದೆ, ಪ್ರತಿ ಹಿಂದೂವು ಸಹ ಸಾಯುವುದರ ಒಳಗೆ ಕಾಶಿ ಗೆ ಹೋಗಬೇಕು ಎಂಬ ಬಯಕೆಯನ್ನು ಇಟ್ಟುಕೊಂಡಿರುತ್ತಾನೆ. ಕಾಶಿಯನ್ನು ದೇವ ಭೂಮಿ ಎಂದು ಕರೆಯಲಾಗುತ್ತದೆ ಎಂದರು.

ದ್ವಾದಶ ಜ್ಯೋತಿರ್ಲಿಂಗ ಗಳಲ್ಲಿ ಕಾಶಿ ಮೊದಲನೆಯದಾಗಿದೆ.  ಬರೀ ಕಾಶಿ ಅಷ್ಟೇ ಅಲ್ಲ ಕೇದಾರ್ ನಾಥ, ಸೋಮನಾಥ , ಅಯೋಧ್ಯೆಯ ಯಂತಹ ಪುಣ್ಯ ಸ್ಥಳಗಳ ಅಭಿವೃದ್ಧಿಯನ್ನು ಮೋದಿಜಿ ಸರ್ಕಾರ ಮಾಡುತ್ತಿದೆ. ಇಂತಹ ಒಂದು ಸುಸಂದರ್ಭವನ್ನು ಕಣ್ತುಂಬಿಕೊಳ್ಳುತ್ತಿರುವ ನಾವೇ ಪುಣ್ಯವಂತರು. ಈ ಸಮಯದಲ್ಲಿ ಒಂದು ನಿರ್ಧಾರ ಮಾಡಿದ್ದೇವೆ. ಯಾರಿಗೆ ಕಾಶಿ ದರ್ಶನ ಮಾಡಬೇಕೆಂಬ ಬಯಕೆ ಇರುತ್ತದೆಯೋ ಅವರನ್ನು ಮುಂದಿನ ದಿನಗಳಲ್ಲಿ ಒಟ್ಟಾಗಿ ವಿಶ್ವನಾಥನ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಮಾಡುವವರಿದ್ದೇವೆ ಎಂದರು.

ಅಲ್ಲದೇ ವಿಶೇಷವಾಗಿ ಶಿವ ದೇವಾಲಯಕ್ಕೆ 10 ಲಕ್ಷರೂ ಗಳನ್ನು ನೀಡುವುದಾಗಿ   ಹೇಳಿದರು.  5 ಲಕ್ಷ ಮಹಾನಗರ ಪಾಲಿಕೆಯಿಂದ ಹಾಗೂ 5 ಲಕ್ಷ ಭಕ್ತಾದಿಗಳಿಗೆ ವಿನಿಯೋಗವಾಗಲಿ ಎಂದು ವೈಯುಕ್ತಿಕವಾಗಿ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರುಗಳಾದ ಬಿ.ವಿ.ಮಂಜುನಾಥ್,  ಚಂಪಕ,  ಗೀತಾಶ್ರೀ ಯೋಗಾನಂದ್,  ಕೆ.ಆರ್  ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್,  ಕ್ಷೇತ್ರದ ಬಿ.ಎಲ್.ಎ 1 ಆದ ಪ್ರಸಾದ್ ಬಾಬು,ಕಾರ್ಯದರ್ಶಿ ಗಿರೀಶ್, ಶಿವ ದೇವಸ್ಥಾನದ ಅಧ್ಯಕ್ಷರಾದ ಪರಮಶಿವಪ್ಪ, ಉಪಾಧ್ಯಕ್ಷರಾದ ಮಹಾದೇವಪ್ಪ, ಖಜಾಂಜಿ ಸುರೇಶ್ ವಾಲಿ,  ಕಾರ್ಯದರ್ಶಿ ಬಸವಣ್ಣ, ನಿರ್ದೇಶಕರಾದ ಪ್ರಕಾಶ್, ಶ್ರೀಕಂಠ ಮೂರ್ತಿ, ಉಮಾಕಾಂತ್, ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಚಾಮುಂಡೇಶ್ವರಿ ಕ್ಷೇತ್ರ ಬಿಜೆಪಿ ವತಿಯಿಂದ ವಾರ್ಡ್ ನಂ 58ರಲ್ಲಿರುವ ಶಿವನ ದೇವಸ್ಥಾನದಲ್ಲಿ ಎಲ್ ಇ ಡಿ  ಪರದೆ ಮೂಲಕ ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಬಿ ಎಂ ರಘು, ಪಾಲಿಕೆ ಸದಸ್ಯ ಆರ್ ಕೆ ಶರತ್ ಕುಮಾರ್, ಸ್ಥಳೀಯ ಮುಖಂಡರಾದ,ರಂಗರಾಜನ್, ಚಂದ್ರಕಾಂತ ಭಟ್, ಪದ್ಮನಾಭ,ಬಿಜೆಪಿ ಮಂಡಲ ಪ್ರದಾನ ಕಾರ್ಯದರ್ಶಿ ಹೆಚ್ ಜಿ ರಾಜಮಣಿ, ನಗರ ಉಪಾಧ್ಯಕ್ಷರಾದ ಹೇಮಾ ಗಂಗಪ್ಪ, ರಾಕೇಶ್ ಭಟ್, ವಿಜಯ ಮಂಜುನಾಥ್, ಶಶಿಕಾಂತ್, ಪ್ರತಾಪ್, ಚಂದ್ರ ಶೇಖರ್ ಸ್ವಾಮಿ, ರಮ್ಯಾ ಪುನೀತ್, ನವೀನ್, ಮಧು ಎಸ್, ರಚಪ್ಪಾಜಿ, ಕಾಂತರಾಜ್ ಅರಸ್, ಗೀತಾ ಮಹೇಶ್, ವಿನುತಾ,ಬಸವಣ್ಣ, ವಾರ್ಡ್ ಅಧ್ಯಕ್ಷ ಲೋಹಿತ್,ಅಜೇಯ್ ಹಿರೇಮಠ್, ಅನೂಪ್ ಮುತಾಲೀಕ್, ಪದ್ಮ,ಜಾಜಿ ಮುಂತಾದವರು ಉಪಸ್ಥಿತರಿದ್ದರು.(ಕೆ.ಎಸ್, ಎಸ್.ಎಂ)

Leave a Reply

comments

Related Articles

error: