ಸುದ್ದಿ ಸಂಕ್ಷಿಪ್ತ

ಪ್ರಕರಣ ಬಗೆಹರಿಸಿಕೊಳ್ಳಲು ಸೂಚನೆ

ಮೈಸೂರು,ಮೇ 6:  ನಗರದ ಕುರಿಮಂಡಿಯ ನಿವಾಸಿ ಪುಟ್ಟಮ್ಮ ಕೋ.ರಂಗಯ್ಯ ನವರು  22-09-2016 ರಂದು ಪಿತ್ರಾರ್ಜಿತ ಆಸ್ತಿಯ ಸಂಬಂಧ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನನ್ವಯ ಎದುರುದಾರರಾದ ನಂಜಮ್ಮ, ನಾಗಮ್ಮ, ಮಂಜುಳಾ ಮತ್ತು ರಾಜಮ್ಮ ರವರನ್ನು ಕರೆಯಿಸಿ ವಿಚಾರಣೆ ಮಾಡಿದ್ದು, ವಿಚಾರಣಾ ಕಾಲದಲ್ಲಿ ನೀಡಿರುವ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಅರ್ಜಿ ವಿಚಾರವು ಆಸ್ತಿ ವಿಚಾರಕ್ಕೆ ಸಂಬಂಧಿಸಿದ್ದು, ಸಿವಿಲ್ ಸ್ವರೂಪವಾದ್ದರಿಂದ ಸೂಕ್ತವೆನಿಸಿದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ನರಸಿಂಹರಾಜ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: