ಕರ್ನಾಟಕಪ್ರಮುಖ ಸುದ್ದಿ

ಲಾಟರಿ ಫೈಯಿಂಗ್ ಸ್ಕ್ವಾಡ್‍ನ ಸಭೆ

ರಾಜ್ಯ(ಮಡಿಕೇರಿ) ಡಿ.15 :-ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ಲಾಟರಿ ಫೈಯಿಂಗ್ ಸ್ಕ್ವಾಡ್ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸಹಾಯಕ ನಿರ್ದೇಶಕರ ಕಚೇರಿ ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ, ಕೊಡಗು ಜಿಲ್ಲೆ, ಜಿಲ್ಲಾಡಳಿತ ಭವನ ಇವರ ಕಚೇರಿಯಲ್ಲಿ ಲಾಟರಿ ಫೈಯಿಂಗ್ ಸ್ಕ್ವಾಡ್‍ನ ಸಭೆ ನಡೆಯಿತು.
ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆಯ ಸಹಾಯಕ ನಿರ್ದೇಶಕರಾದ ಸುಜಾತ, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಕೇಶವ ಮೂರ್ತಿ, ಅಭಿವೃದ್ಧಿ ಅಧಿಕಾರಿ ಎಂ.ಪಿ.ಪ್ರಸನ್ನ, ಇತರರು ಇದ್ದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಲಾಟರಿ ಮತ್ತು ಮಟ್ಕಾ ದಂಧೆಗಳು ನಡೆಯುವುದನ್ನು ನಿಷೇಧಿಸಲಾಗಿದ್ದು, ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ಅಂತವರ ವಿರುದ್ದ ಲಾಟರಿ ರೆಗ್ಯುಲೇಷನ್ ಆಕ್ಟ್ 1998 ರಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಕ್ರಮ ಲಾಟರಿ ಮಾರಾಟ ಮತ್ತು ಖರೀದಿ ಮಾಡುವವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದ್ದು ಯಾವುದೇ ಅಕ್ರಮಗಳಿಗೆ ಸಾರ್ವಜನಿಕರು ಉತ್ತೇಜನ ನೀಡಬಾರದು. ಅಕ್ರಮ ಲಾಟರಿ ಮಾರಾಟ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಅಥವಾ ಲಾಟರಿ ಫೈಯಿಂಗ್ ಸ್ಕ್ವಾಡ್‍ನ ದೂ.ಸಂ. 08272-228678 ಗೆ ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: