ಮೈಸೂರು

ಮನೆಯಲ್ಲಿದ್ದ ವಿದೇಶಿ ಡಾಲರ್ ಕಳುವು

ಮೈಸೂರು, ಮೇ.6:  ಇಲ್ಲಿನ ವಿಜಯನಗರ ಎರಡನೇ ಹಂತದ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ವಿದೇಶಿ ಡಾಲರ್ ಗಳನ್ನು ಕದ್ದೊಯ್ದಿದ್ದಾರೆ.

ವಿಜಯನಗರ ಎರಡನೇ ಹಂತದ ಕೆಬಿಎಲ್ ಎನ್ ಕ್ಲೈವ್ ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಡಾಲರ್ ಗಳನ್ನು ಅಪಹರಿಸಿದ್ದಾರೆ ಎನ್ನಲಾಗಿದೆ. ನೆರಮನೆಯವರು ವಿಜಯನಗರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದು, ಪೊಲೀಸರು, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. – (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: