ಕರ್ನಾಟಕಪ್ರಮುಖ ಸುದ್ದಿ

ಚುನಾವಣೆಯನ್ನು ಮುಂದಿಟ್ಟು ಮತಾಂತರ ನಿಷೇಧ ಕಾಯ್ದೆ ತರುತ್ತಿದ್ದಾರೆ : ಡಿ.ಕೆ.ಶಿವಕುಮಾರ್ ಆರೋಪ

ರಾಜ್ಯ(ಬೆಳಗಾವಿ),ಡಿ.15 :- ಚುನಾವಣೆಯನ್ನು ಮುಂದಿಟ್ಟುಕೊಂಡು ಮತಾಂತರ ನಿಷೇಧ ಕಾಯ್ದೆಯನ್ನು ತರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳಿಗೆ ಸರ್ಕಾರ ಪರಿಹಾರ ಕೊಡದೆ ಇರುವುದು, ಮೇಕೆದಾಟು ಪಾದಯಾತ್ರೆ, ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳ ಹಾಗೂ ಚುನಾವಣೆಯಲ್ಲಿ ಶ್ರಮಿಸಿರುವ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಗುತ್ತಿಗೆದಾರರ ವಿಚಾರದಲ್ಲಿ ಬಂದಿರುವ ಪತ್ರದ ಬಗ್ಗೆ ನಾವು ವಿಧಾನ ಸೌಧದಲ್ಲಿ ಮಾತನಾಡುತ್ತೇವೆ. ಅದು ಕೂಡ ನಮ್ಮ ಕರ್ತವ್ಯವಾಗಿದೆ, ಮತಾಂತರ ಕಾಯ್ದೆ ಬಗ್ಗೆ ಅವರು ಕೊನೆಯಲ್ಲಿ ತೆಗೆದುಕೊಳ್ಳತ್ತಾರೆ ನಾವು ಅದಕ್ಕೂ ಸಿದ್ದರಾಗಿದ್ದೇವೆ. ಮತಾಂತರ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಖಂಡಿತವಾಗಿಯು ವಿರೋಧ ಮಾಡುತ್ತದೆ. ಈಗಾಗಲೇ ಇದರ ಬಗ್ಗೆ ಕಾನೂನುಗಳು ಇವೆ ಅದನ್ನೇ ಜಾರಿ ಮಾಡಿದರೆ ಸಾಕು ಮತ್ತೆ ಹೊಸದಾಗಿ ಕಾನೂನುಗಳನ್ನು ತರುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಇವರು ಚುನಾವಣೆಯನ್ನು ಮುಂದುಟ್ಟುಕೊಂಡು ಬೇಡವಾಗಿರುವುದನ್ನು ಮಾಡುತ್ತಿದ್ದಾರೆ. ಮತಾಂತರ ಕಾಯ್ದೆ ಮಾಡುವುದರಿಂದ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಕೆಲಸ ಇವರದು ಎಂದು ದೂರಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: