
ಮೈಸೂರು
ಡಿ.16 : ಮುತ್ತುರಾಯನ ಗುಡ್ಡದಲ್ಲಿ ರಕ್ತದಾನ ಶಿಬಿರ
ಮೈಸೂರು,ಡಿ.15 : – ‘ಹನುಮ ಜಯಂತಿ’ಯ ಪ್ರಯುಕ್ತ ‘ರಕ್ತದಾನ ಶಿಬಿರ’ವನ್ನು ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ವತಿಯಿಂದ ಡಿ.16 ರಂದು ಮೈಸೂರಿನ ಮುತ್ತುರಾಯನ ಗುಡ್ಡದಲ್ಲಿ ಹಮ್ಮಿಕೊಳ್ಳಲಾಗಿದೆ.
ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತುರಾಯ ಸೇವಾ ಸಮಿತಿಯ ಅಧ್ಯಕ್ಷರಾದ ಬಿ. ಶ್ರೀನಿವಾಸ್ ಮಾತನಾಡಿ, ಡಿ.16 ರಂದು ಮೈಸೂರಿನ ಪ್ರತಿಷ್ಠಿತ ಬಡಾವಣೆಯಾದ ವಿಜಯನಗರ 4 ನೇ ಹಂತದ ಸಮೀಪ , ಬಸವನಪುರ ಗ್ರಾಮ, ಮುತ್ತುರಾಯನ ಗುಡ್ಡದಲ್ಲಿ ‘ಹನುಮ ಜಯಂತಿ’ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಮುತ್ತುರಾಯ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದೆ. ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ವತಿಯಿಂದ ‘ರಕ್ತದಾನ’ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮವು ಮುತ್ತುರಾಯನಗುಡ್ಡ, ಕಲ್ಯಾಣಿ ನಗರ, ವಿಜಯನಗರ 4 ನೇ ಹಂತ, ಬಸವನಪುರ ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9901342434 ಸಂಪರ್ಕಿಸಬಹುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಶ್ರೀಕಾಂತ್, ಕಾರ್ಯದರ್ಶಿ ಮೊಗಣ್ಣೇ ಗೌಡ, ಟ್ರಸ್ಟಿ ವೈ.ಉಜ್ವಲ್ ಚಂದ್ರ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಂ)