
ಕರ್ನಾಟಕಪ್ರಮುಖ ಸುದ್ದಿ
ಹೋರಾಟ ಮಾಡುವುದನ್ನು ಸಿಎಂ ಕೇಳಿ ಮಾಡಬೇಕಾ ?: ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ
ರಾಜ್ಯ(ಬೆಳಗಾವಿ),ಡಿ.16 :- ನಾವು ಹೋರಾಟ ಮಾಡುವುದನ್ನು ಸಿಎಂ ಕೇಳಿ ಮಾಡಬೇಕಾ , ಇದು ನಮ್ಮ ಹಕ್ಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಹೋರಾಟಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾವು ಇವತ್ತು ಮಾಡುತ್ತಿರುವ ಪ್ರತಿಭಟನೆ ಬೆಲೆ ಏರಿಕೆಯ ವಿರುದ್ಧ, ಇನ್ನೂ ಸುಮಾರು ವಿಷಯಗಳ ಬಗ್ಗೆ ಹೋರಾಟ ಮಾಡುತ್ತೇವೆ ಅದರಲ್ಲಿ ಪ್ರಮುಖವಾಗಿ, ಕೊರೊನಾದಿಂದ ಮೃತರಾದವರಿಗೆ ಪರಿಹಾರ, ಬೆಳೆ ಹಾನಿ ಪರಿಹಾರ , ಬೆಲೆ ಏರಿಕೆ , ಗುತ್ತಿಗೆದಾರರ ಕಮಿಷನ್ ಬಗ್ಗೆ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಹೋರಾಟ ಬೇಡ, ಕಲಾಪದಲ್ಲಿ ಮಾತನಾಡೋಣ ಎಂದು ಸಿಎಂ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ನಾವು ಹೋರಾಟ ಮಾಡುವುದನ್ನು ಅವರನ್ನು ಕೇಳಿಕೊಂಡು ಮಾಡಬೇಕಾ , ಹೋರಾಟ ಮತ್ತು ಚಳುವಳಿಯನ್ನು ಮಾಡುವುದು ನಮ್ಮ ಹಕ್ಕು ಎಂದಿರುವ ಸಿದ್ದರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ. (ಎಸ್.ಎಂ,ಎಸ್.ಎಚ್)