ಮೈಸೂರು

ಮಕ್ಕಳು ಪೋಷಕರನ್ನು ಕಡೆಗಣಿಸುವ ಪ್ರಕರಣಗಳ ಹೆಚ್ಚಳ ಆತಂಕಕಾರಿ: ಮೀನಾ ತೂಗುದೀಪ್

ಮೈಸೂರು, ಮೇ ೬: ಜೀವನ ಶೈಲಿ ಬದಲಾದಂತೆ ಮಕ್ಕಳು ಪೋಷಕರನ್ನು ಕಡೆಗಣಿಸುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದು ಮೀನಾ ತೂಗುದೀಪ್ ಬೇಸರ ವ್ಯಕ್ತಪಡಿಸಿದರು.
ಶನಿವಾರ ಮೈಸೂರಿನ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಯಕಾರ ಗುರುಕುಲದ ೫೩ನೇ ಜೋತಿಷ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಕಷ್ಟಪಟ್ಟು ಸಾಲ ಸೋಲ ಮಾಡಿ ಬೆಳೆಸಿರುತ್ತಾರೆ. ಆದರೆ ಇಂದು ಪೋಷಕರನ್ನು ಕಡೆಗಣಿಸಿ ದೂರ ಮಾಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಮಕ್ಕಳು ತಮ್ಮ ಪೋಷಕರರನ್ನು ಎಂದಿಗೂ ಕೈಬಿಡಬಾರದು. ಮುಪ್ಪಿನಲ್ಲಿ ಮಕ್ಕಳೇ ಪೋಷಕರಿಗೆ ಆಸರೆ. ಹಾಗಾಗಿ ಯಾವುದೇ ಕಾರಣಕ್ಕೂ ಪೋಷಕರನ್ನು ಕಡೆಗಣಿಸದೆ ಉತ್ತಮವಾಗಿ ನೋಡಿಕೊಳ್ಳಿ. ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಲಿದ್ದು ಲಮ್ ಮ್ಯಾರೇಜ್ ಆಗಲಿ ಅಥವಾ ಅರೇಂಜ್ ಮ್ಯಾರೇಜ್ ಆಗಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂಸಾರ ನಡೆಸಬೇಕು. ಆಗಲೇ ದಾಂಪತ್ಯ ಜೀವನಕ್ಕೆ ನಿಜವಾದ ಅರ್ಥ ದೊರೆಯಲಿದೆ ಎಂದು ಹೇಳಿದರು.
ಇದೇ ವೇಳೆ ಮೂಗೂರು ಮಧು ದೀಕ್ಷಿತ್ ಅವರು ಮದುವೆ ಕುರಿತು ಉಪನ್ಯಾಸ ನೀಡಿದರು. ಮಾಯಕಾರ ಗುರುಕುಲದ ನಿರ್ವಾಹಕಿ ರೂಪಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: