ಮೈಸೂರು

ಮುತ್ತುರಾಯನ ಗುಡ್ಡದಲ್ಲಿ ಹನುಮಜಯಂತಿ ಆಚರಣೆ

ಮೈಸೂರು,ಡಿ.18:- ವಿಜಯನಗರ ನಾಲ್ಕನೇ ಹಂತ ಮಾದಗಳ್ಳಿ ಬಸವನಪುರದಲ್ಲಿರುವ ಮುತ್ತುರಾಯ ಸೇವಾ ಟ್ರಸ್ಟ್ ವತಿಯಿಂದ ಮುತ್ತುರಾಯನ ಗುಡ್ಡದಲ್ಲಿ ಇತ್ತೀಚೆಗೆ ಹನುಮಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಮಾತನಾಡಿ ಹನುಮ  ಈ ನೆಲದ ಸಂಸ್ಕೃತಿ ,ಈ ನೆಲದ ಸಭ್ಯತೆ, ಈ ನೆಲದ ಬದುಕು,   ಅದರ ಪ್ರತೀಕ. ಅದರಲ್ಲೂ ಕೂಡ ವಾಯುಪುತ್ರ ಇಡೀ ಬದುಕಿನ ಇತಿಹಾಸ ತೆಗೆದುಕೊಂಡಾಗ, ಧಾರ್ಮಿಕ ವಿಚಾರ ಮೆಲುಕು ಹಾಕಿದಾಗ ಚಿರಂಜೀವಿ ಅಂತ ಕರೆಸಿಕೊಳ್ಳುವ ವ್ಯಕ್ತಿ ಹನುಮ ಮಾತ್ರ. ಎಲ್ಲ ಸನ್ನಿವೇಶಗಳಲ್ಲಿ ಕೂಡ ಇದ್ದಾನೆ. ಶ್ರೀಕೃಷ್ಣ ಪರಮಾತ್ಮ ಮಹಾಭಾರತ ಯುದ್ಧದ ಕಾಲಘಟ್ಟದಲ್ಲಿ ನಿನ್ನ ಸಹಕಾರ ಬೇಕು ಎಂದು ಪ್ರಾರ್ಥಿಸಿದ್ದು ಹನುಮಂತನನ್ನು, ರಾಮಾಯಣದಲ್ಲಿ ಸೀತೆಯನ್ನು ಲಂಕೆಯಿಂದ ತರಲು ರಾಮ ಸ್ಮರಿಸಿದ್ದು ಹನುಮನನ್ನು, ಮಹಾಭಾರತ, ರಾಮಾಯಣ ಇರಬಹುದು, ಬದುಕಿನ ಆಧಾರಸ್ತಂಭ ಧರ್ಮದ ರಕ್ಷಣೆಯ ಹಿನ್ನಲೆಯಲ್ಲಿ ಮುಂಚೂಣಿಯಲ್ಲಿ ನಿಂತ ಸ್ವಾರ್ಥವಿಲ್ಲದ, ಫಲಾಪೇಕ್ಷೆಯಿಲ್ಲದೆ ನೆಲದ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಅಪರೂಪದ ಶಕ್ತಿ ವಾಯುಪುತ್ರ. ನಮ್ಮ ನಂಬಿಕೆಯಲ್ಲಿ ಚಿರಂಜೀವಿ.  ಅವನನ್ನು ಆರಾಧಿಸುತ್ತೇವೆ.  ನಮ್ಮ ಬದುಕು ಕೂಡ ಶುಚಿಯಾಗಬೇಕು ಎಂದು ಮುಕ್ತ ಮನಸ್ಸಿನಿಂದ ಆರಾಧಿಸುತ್ತೇವೆ. ಅಮೇರಿಕ ದೇಶದ ಹಿಂದಿನ ಅಧ್ಯಕ್ಷ  ಒಬಾಮಾ ನಿನ್ನ ಹಿಂದಿರುವ ಶಕ್ತಿ ಯಾವುದು ಎಂದು ಕೇಳಿದಾಗ ಮಾರುತಿಯ ಅನುಗ್ರಹದಿಂದ ಅಮೇರಿಕದ ಅಧ್ಯಕ್ಷನಾಗಿರುವುದರ ಕುರಿತು   ಹೇಳುತ್ತಾರೆ. ಬರ್ಮ, ಇಂಡೋನೇಶಿಯಾ, ಯಾವ ದೇಶ ತೆಗೆದುಕೊಂಡರೂ ಭಾರತೀಯ ದೇವಸ್ಥಾನಗಳಿವೆ. ಎಲ್ಲ  ದೇಶಗಳಲ್ಲಿಯೂ ಮಾರುತಿಯ ಆರಾಧಕರಿದ್ದಾರೆ. ಸದಾ ಕಾಲ ಸುಖ, ಶಾಂತಿ ನೆಮ್ಮದಿ ಸಮೃದ್ಧಿ ನೆಲೆಗೊಳ್ಳಲು ಆತ ಪ್ರೇರಣಾಶಕ್ತಿಯಾಗಿ ನಿಲ್ಲಬೇಕು ಎಂದರು.

ಮುತ್ತತ್ತಿರಾಯನ ಹೆಸರಿನಲ್ಲಿರುವ  ಬೆಟ್ಟ ಮಾರುತಿ ಬೆಟ್ಟವಾಗಬೇಕು.  ಬೆಳಕು ಇಲ್ ಲಿನೆಲೆಯಾಗಬೇಕು. ಸುತ  ಮುತ್ತಲಿನ ಗ್ರಾಮದವರಿಗೆ ಲಭ್ಯವಾಗಬೇಕು. ಯಾರ್ಯಾರ ಬದುಕಿನಲ್ಲಿ ಬೆಳಕು ಬೇಕೋ, ಸಮಸ್ಯೆ ಇದೆ ಎಂದು ಬರುತ್ತಾರೋ ಅವರಿಗೆ ಅನುಗ್ರಹದಿಂದ ದೈವಿಶಕ್ತಿಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಬಿ.ಶ್ರೀನಿವಾಸ, ಗೌರವಾಧ್ಯಕ್ಷ ಮಹದೇವ, ಕಾರ್ಯದರ್ಶಿ ಮೊಗಣ್ಣ ಗೌಡ, ಉಪಾಧ್ಯಕ್ಷ ಎಂ.ಮಾದೇಶ, ಟ್ರಸ್ಟಿ ಜಗದೀಶ್ ಗೌಡ, ಅರ್ಪಿತ ಸಿಂಹ, ಬಿಜೆಪಿ ಮುಖಂಡರಾದ ಗೋಪಾಲ್ ರಾವ್, ಮೈಸೂರು ಪೇಂಟ್ &ವಾರ್ನಿಶ್ ಅಧ್ಯಕ್ಷ ಎನ್.ವಿ.ಫಣೀಶ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಬೀರಿಹುಂಡಿ ಬಸವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಲಯನ್ಸ್ ಬ್ಲಡ್ ಸೆಂಟರ್ -ಜೀವಧಾರ ಲಯನ್ಸ್ ಕ್ಲಬ್ ಆಫ್ ಮೈಸೂರು ಪರಂಪರೆ ಇವರ ವತಿಯಿಂದ ರಕ್ತದಾನ ಶಿಬಿರ ಕೂಡ ನಡೆಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: