ಮೈಸೂರು

ಮೈಸೂರು ಮಕ್ಕಳ ಮಾರಾಟ ಜಾಲ ಪ್ರಕರಣ : ಆರು ಮಂದಿಗೆ ಜಾಮೀನು

ಮೈಸೂರು,ಮೇ.6:-  ಮೈಸೂರಿನಲ್ಲಿ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಕಿಂಗ್ ಪಿನ್  ಉಷಾ, ಪ್ರಾನ್ಸಿಸ್ ಸೇರಿ ದಂತೆ ಹನ್ನೊಂದು ಮಂದಿ ಆರೋಪಿಗಳಲ್ಲಿ  ಪೈಕಿ 6 ಮಂದಿಗೆ ಜಾಮೀನು ದೊರಕಿದೆ.

ಆರೋಪಿಗಳ ಅರ್ಜಿಯನ್ನು ಪುರಸ್ಕರಿಸಿದ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು ರೇಣುಕಾ, ಮೋಹನ್‌, ರವಿಚಂದ್ರ ಹಾಗೂ ಮದನ್‌ಲಾಲ್‌ಗೆ ಜಾಮೀನು ನೀಡಿದೆ. ಅನುಷಾ ಅಲಿಯಾಸ್‌ ಶ್ರೀಮತಿ, ಅಶೋಕ್‌ ಸೇರಿದಂತೆ ಇತರ ಐವರಿಗೆ ನ್ಯಾಯಾಂಗ ಬಂಧನ ಮುಂದುವರಿದಿದೆ.

ನವಂಬರ್ ನಲ್ಲಿ  ಮಕ್ಕಳ ಮಾರಾಟ ಆರೋಪದಲ್ಲಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂಜನಗೂಡಿನ ಪಾರ್ವತಿ ಎಂಬುವರ ಪುತ್ರನ ಅಪಹರಣ ಪ್ರಕರಣದ ತನಿಖೆ ಬಳಿಕ ಹೊರ ಬಂದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ತೀವ್ರ ವಿಚಾರಣೆಯ ಬಳಿಕ ಉಷಾ, ಫ್ರಾನ್ಸಿಸ್‌ಗೆ ಸೇರಿದ ಮಂಡಿ ಮೊಹಲ್ಲಾದ ‘ನಸೀಮಾ ಆಸ್ಪತ್ರೆ’ಯಿಂದ ಮಕ್ಕಳ ಮಾರಾಟ ನಡೆಸುವ ಜಾಲದ ಸಂಪೂರ್ಣ ಮಾಹಿತಿ  ಹೊರಬಂದಿತ್ತು. ತನಿಖೆಯ ಬಳಿಕ ಜಿಲ್ಲಾ ಪೊಲೀಸರು ಮಂಡಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದರು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: