ಪ್ರಮುಖ ಸುದ್ದಿ

ತೊನ್ನು ಶವಗಳನ್ನು ಹೊರತೆಗೆದು ಸುಟ್ಟ ಗ್ರಾಮಸ್ಥರು!

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಮೇ 6: ಮೂಡ ನಂಬಿಕೆ ಎಂದರೆ ಇದೇ ಇರಬೇಕು. ಅತ್ಯಾಧುನಿಕ ಯುಗದಲ್ಲೂ ಮೌಢ್ಯಕ್ಕೆ ಬಲಿಯಾಗಿ ಹೂತಿದ್ದ ಶವಗಳನ್ನೇ ಹೊರತೆಗೆದು ಪುನಃ ಸುಟ್ಟು ಹಾಕಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದ್ದು ಜನರ ಮನಸ್ಸಲ್ಲಿ ಮೌಢ್ಯ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಕನ್ನಡಿಯಂತಿದೆ.

ತೊನ್ನು ಇದ್ದವರನ್ನು ಸುಡದೆ ಮಣ್ಣು ಮಾಡಿದರೆ ಮಳೆಯಾಗುವುದಿಲ್ಲ ಎಂಬ ಕಾರಣಕ್ಕೆ ರಾಘವಾಪುರ ಗ್ರಾಮದ ಸುಬ್ಬಮ್ಮ ಹಾಗೂ ಜಯಮ್ಮ ಎಂಬುವವರ ಶವಗಳನ್ನು ಹೊರತೆಗೆದು ಬಳಿಕ ಸುಟ್ಟು ಹಾಕಲಾಗಿದೆ. ಶವಗಳನ್ನು ಸುಟ್ಟ ಬಳಿಕ ಗ್ರಾಮದಲ್ಲಿ ಮಳೆಯಾಗಿದ್ದು ಗ್ರಾಮಸ್ಥರ ನಂಬಿಕೆಗೆ ಬಲ ತುಂಬಿದೆ. ಇಂತಹ ಘಟನೆಗಳು ಸಾರ್ವಜನಿಕರ ಮನಸ್ಸಿನಲ್ಲಿ ಮೂಡ ನಂಬಿಕೆಗಳನ್ನು ಬಿತ್ತಲಿದ್ದು ಸರಿತಪ್ಪುಗಳನ್ನು ತಿಳಿದು ಮುನ್ನಡೆಯಬೇಕಿದೆ. ಕೇವಲ ತೊನ್ನಿದ್ದ ಮಾತ್ರಕ್ಕೆ ಮಳೆಯಾಗುವುದಿಲ್ಲವೆಂಬ ವಿಚಿತ್ರ ಕಾರಣಕ್ಕೆ ಮಳೆರಾಯನೇ ಬೆರಗಾಗಿ ಮಳೆ ಸುರಿಸಿದ್ದಾನೆ. (ವರದಿ ಬಿ.ಎಂ)

 

Leave a Reply

comments

Related Articles

error: