ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವುದು ಕಾಂಗ್ರೆಸ್ ಮೊದಲ ಸಂಕಲ್ಪ : ಡಿ.ಕೆ.ಶಿವಕುಮಾರ್

ರಾಜ್ಯ(ಬೆಳಗಾವಿ),ಡಿ.20 : ರಾಜ್ಯದಲ್ಲಿ ಆಗುತ್ತಿರು ಭಾಷಾ ಸಂಘರ್ಷವನ್ನು ಇದೇ ಸಂಘಟನೆ ಮಾಡುತ್ತಿದೆ ಎಂದು ಹೇಳಲು ನಾನು ತಯಾರಿಲ್ಲ, ಅದರ ಮೇಲೆ ತನಿಖೆಯಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಮೊದಲು ಶಾಂತಿಯನ್ನು ಕಾಪಾಡ ಬೇಕು ಎಂಬುದು ಕಾಂಗ್ರೆಸ್ ಪಕ್ಷದ ಸಂಕಲ್ಪವಾಗಿದೆ. ರಾಜ್ಯದಲ್ಲಿ ಆಗುತ್ತಿರುವ ಸಂಘರ್ಷಕ್ಕೆ ಯಾವುದೋ ಒಂದು ಸಂಘಟನೆ ಕಾರಣ ಅಂತ ನಾನು ಏನೂ ತಿಳಿಯದೇ ಹೇಳಲು ತಯಾರಿಲ್ಲ, ಯಾರೋ ಕಿಡಿಕೇಡಿಗಳು ಶಾಂತಿ ಕದಡಲು  ಈ ರೀತಿ ಮಾಡುತ್ತಿದ್ದಾರೆ. ಸರ್ಕಾರ ಇದರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮೊದಲಿನಿಂದಲೂ ಪೊಲೀಸರು ಕೆಲವು ಸಂಘ ಸಂಸ್ಥೆಗಳನ್ನು ಅವರಷ್ಟಕ್ಕೇ  ಬಿಟ್ಟು ಕೊಟ್ಟರು.  ಅದೇ ಇವತ್ತು ಇದಕ್ಕೆಲ್ಲ ಮೂಲ ಕಾರಣವಾಗಿದೆ. ಕೂಡಲೇ ಪೊಲೀಸರು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು.
ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಮತ್ತು ಇತರ ಸಂಘ ಸಂಸ್ಥೆಗಳು ಕಾನೂನನ್ನು ಕೈಗೆ ತೆಗೆದುಕೊಳ್ಳದೆ, ಶಾಂತಿಯನ್ನು ಕೆಡಿಸದೆ , ರಾಜ್ಯದ ಯಾರಿಗೂ  ತೊಂದರೆಯಾಗದ ರೀತಿಯಲ್ಲಿ ಮುಂದಿನ ಕಾರ್ಯಗಳು ನಡೆಸಿ ಎಂದು ಮನವಿ ಮಾಡಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: