ಪ್ರಮುಖ ಸುದ್ದಿಮೈಸೂರು

ಗಾಂಧಿನಗರದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಸಚಿವ ರಮೇಶ್ ಜಿಗಜಿಣಗಿ ಚಾಲನೆ

ಪ್ರಮುಖಸುದ್ದಿ,ಮೈಸೂರು,ಮೇ.7: ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಭಾನುವಾರ ಮೈಸೂರಿನ ಗಾಂಧಿನಗರದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.

ಸ್ವಚ್ಛ ಭಾರತ ಅಭಿಯಾನಕ್ಕೆ ತಾವೇ ಖುದ್ದು ಕಸ ತೆಗೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸ್ವಚ್ಛ ಭಾರತ ಅಭಿಯಾನ ಪ್ರಧಾನಿ ಮೋದಿಯವರದ್ದಾಗಿದ್ದು, ದೇಶದ ಮೂಲೆ ಮೂಲೆಯನ್ನೂ ತಲುಪಬೇಕು. ಸ್ವಚ್ಛತೆಯಲ್ಲಿ ಮುಂದಿದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸಾರ್ವಜನಿಕರು ತಮ್ಮ ಮನೆ ಸ್ವಚ್ಛ ಇದ್ದಾಗ ಊರು ಸ್ವಚ್ಛ ಇರತ್ತೆ. ಊರು ಸ್ವಚ್ಛ ಇದ್ದಾಗ ತಾಲೂಕು ಸ್ವಚ್ಛ ಇರತ್ತೆ, ತಾಲೂಕು ಸ್ವಚ್ಛ ಇದ್ದಾಗ ರಾಜ್ಯ ಸ್ವಚ್ಛ ಇರಲಿದೆ. ರಾಜ್ಯ ಸ್ವಚ್ಛ ಇದ್ದಾಗ ದೇಶ ಸ್ವಚ್ಛ ಇರಲಿದೆ ಎಂಬುದನ್ನು ಅರಿತು ಜನಾಂದೋಲನ  ಎಂದರು.

ದೇಶದಲ್ಲಿ 11ಕೋಟಿ ಜನತೆಗೆ ಶೌಚಾಲಯ ಇಲ್ಲ. 4ಕೋಟಿ ವೈಯುಕ್ತಿಕ ಶೌಚಾಲಯ ನಿರ್ಮಾಣವಾಗಿದೆ. 2ಲಕ್ಷ ಜಿಲ್ಲೆಗಳು ಬಯಲು ಶೌಚ ಮುಕ್ತ ಎಂದು ಡಿಕ್ಲೇರ್ ಆಗಿದೆ.  ಕಳೆದೆರಡು ವರುಷಗಳ ಹಿಂದೆ 40 ಪ್ರತಿಶತ ಶೌಚಾಲಯ ಇತ್ತು. ಇದೀಗ 65.66ಪ್ರತಿಶತ ಶೌಚಾಲಯ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಮಾಜಿ ಸಚಿವ ಎಸ್.ಎ.ರಾಮದಾಸ್, ಗ್ರಾಮಾಂತರ ಅಧ್ಯಕ್ಷ ಕೋಟೆ ಶಿವಣ್ಣ, ಪಾಲಿಕೆ ಸದಸ್ಯ ಬಿ.ಎಂ.ನಟರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: