ಮೈಸೂರು

ಮೇ 10 ರಂದು ಮಾವು-ಹಲಸು ಮೇಳದ ಪೂರ್ವಭಾವಿ ಸಭೆ : ರೈತರಿಂದ ಸಲಹೆ ನಿರೀಕ್ಷೆ

ಮೈಸೂರು, ಮೇ 7 :- ಮಾವು ಮತ್ತು ಹಲಸು ಮೇಳದ ದಿನಾಂಕ ನಿಗದಿಪಡಿಸಲು ಮೇ 10 ರಂದು ಬೆಳಿಗ್ಗೆ 11.30ಕ್ಕೆ ಕರ್ಜನ್ ಪಾರ್ಕ್‍ನಲ್ಲಿರುವ ತೋಟಗಾರಿಕಾ ಉಪನಿರ್ದೇಶಕರ ಕಚೇರಿಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಆಸಕ್ತ ರೈತರು ಭಾಗವಹಿಸಿ ಸಲಹೆ ನೀಡಬಹುದು.

ಮೈಸೂರು ಜಿಲ್ಲೆಯಲ್ಲಿ ಮಾವು ಮತ್ತು ಹಲಸು ಬೆಳೆಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8497882732 ಅನ್ನು ಸಂಪರ್ಕಿಸಬಹುದು.

(ಎನ್.ಬಿ.ಎನ್)

Leave a Reply

comments

Related Articles

error: