ಕರ್ನಾಟಕಪ್ರಮುಖ ಸುದ್ದಿ

ಇಂಜಿನಿಯರಿಂಗ್ ಕಾಲೇಜಿಗೆ ಅನುದಾನ ಬಿಡುಗಡೆಗೆ ಕೋರಿದ ಶಾಸಕ ರೇವಣ್ಣ

ರಾಜ್ಯ(ಬೆಳಗಾವಿ),ಡಿ.22 :- ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ  ಶಾಸಕ  ಹೆಚ್.ಡಿ.ರೇವಣ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಬಗ್ಗೆ ಪ್ರಸ್ತಾಪ ಮಾಡಿ ವಿದ್ಯಾರ್ಥಿಗಳ ಅನುಕೂಲಗಳಿಗೆ ನೆರವಾಗಿದ್ದಾರೆ.
ಜೆಡಿಎಸ್ ಪಕ್ಷದ ಶಾಸಕ ಹೆಚ್.ಡಿ.ರೇವಣ್ಣ ಮಾತನಾಡಿ  ಹಾಸನದಲ್ಲಿನ ಇಂಜಿನಿಯರಿಂಗ್ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿ ಪೀಠೋಪಕರಣ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡೊಕೊಡುವಂತೆ ಮನವಿ ಮಾಡಿದ್ದಾರೆ.
ಅಲ್ಲದೆ ಉಪನ್ಯಾಸಕರ ಹುದ್ದೆ ಕೂಡ ಇಲ್ಲಿ ಖಾಲಿ ಇದ್ದು, ಅತಿಥಿ ಉಪನ್ಯಾಸಕರು ಸಂಪೂರ್ಣವಾಗಿ ಇಲ್ಲದಂತಾಗಿದೆ. ಹೀಗಾಗಿ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಲಾಕ್ ಡೌನ್ ನಂತರ ಮಕ್ಕಳ ಒಲವು ಹೆಚ್ಚಾಗಿದೆ ಎಂದು ಈ ವೇಳೆ ತಿಳಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: