ಮೈಸೂರು

ಬದುಕು ಬದಲಾಗಬೇಕಾದರೆ ವರ್ತನೆಯೂ ಬದಲಾಗಬೇಕು : ಕರ್ನಲ್ ಬಿ.ಎನ್. ಚೇತನ್

ಮೈಸೂರು,ಡಿ.22:- ಬದುಕು ಬದಲಾಗಬೇಕಾದರೆ ವರ್ತನೆಯೂ ಬದಲಾಗಬೇಕು ಎಂದು ನಿವೃತ್ತ ಸೇನಾಧಿಕಾರಿಗಳಾದ ಕರ್ನಲ್ ಬಿ.ಎನ್. ಚೇತನ್‍ ಅವರು ಹೇಳಿದರು.
ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-55’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ “ಜೀವನದಲ್ಲಿ ಅತ್ಯುತ್ತಮ ಸಾಧನೆಯ ಸಿದ್ಧತೆ” ವಿಷಯ ಕುರಿತು ಉಪನ್ಯಾಸ ನೀಡಿದರು.
ನಮ್ಮ ಆತ್ಮವಿಶ್ವಾಸ, ನಾವು ಅಳವಡಿಸಿಕೊಂಡಿರುವ ಮೌಲ್ಯಗಳು, ನೀತಿ-ನಿಯಮಗಳು ನಮ್ಮ ಗುಣವನ್ನು ನಿರ್ಧರಿಸುತ್ತವೆ. ಮೊದಲು ನಮ್ಮನ್ನು ನಾವು ನಂಬಬೇಕು. ನಮ್ಮ ವರ್ತನೆ ಮತ್ತು ವ್ಯಕ್ತಿತ್ವವೇ ಜೀವನದಲ್ಲಿ ಬಹಳ ಮುಖ್ಯ. ನಮ್ಮ ಅಂತರಂಗ ಮತ್ತು ಬಹಿರಂಗದ ಸಂವಹನ ವ್ಯಕ್ತಿತ್ವನ್ನು ರೂಪಿಸುವಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾನಸಿಕ ಸದೃಢತೆಯ ಜೊತೆಗೆ ದೈಹಿಕವಾಗಿಯೂ ಅತ್ಯಂತ ಸದೃಢವಾಗಿರುವುದು ಬಹಳ ಅವಶ್ಯಕ. ಭಯವು ನಮ್ಮನ್ನು ಕುಗ್ಗಿಸುತ್ತದೆ. ಧೈರ್ಯ ಮಾತ್ರ ನಮ್ಮನ್ನು ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಪ್ರೇರೆಪಿಸುತ್ತದೆ ಎಂದು ತಿಳಿಸಿದರು.
ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಆನ್‍ ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಸುತ್ತೂರು ಶ್ರೀಕ್ಷೇತ್ರದ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಹೊನ್ನೇಗೌಡ ಕಾರ್ಯಕ್ರಮ ನಿರ್ವಹಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: