ಮೈಸೂರು

ಎಸ್ ಡಿ ಎಮ್ ಐ ಎಮ್ ಡಿ ಸ೦ಸ್ಥೆಯಲ್ಲಿ ಅ೦ತರರಾಷ್ಟ್ರೀಯ ಮಾನವ ಸ೦ಪನ್ಮೂಲ ಸಮ್ಮೇಳನ

ಮೈಸೂರು, ಡಿ.23:- ಹೊಸ ಸಾಮಾನ್ಯ ವ್ಯವಹಾರ ನಿರ್ವಹಣೆಯ ವಾತಾವರಣದಲ್ಲಿ ತಮ್ಮ ಮಕಾರ್ಮಿಕರ ಕಲ್ಯಾಣ ವಿಷಯದಲ್ಲಿ ಉನ್ನತ ನಾಯಕರು ತಮ್ಮ ಒಟ್ಟಾರೆ ವರ್ತನೆಯನ್ ನುಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೆಡ್ ಮೀಟರಿ೦ಗ್ ಅ೦ಡ್ ಪ್ರೊಟೆಕ್ಷನ್ಸಿಸ್ಟಮ್ಸ್, ಎಲ್ ಅ೦ಡ್ ಟಿಎಲೆಕ್ಟ್ರ್ರಿಕಲ್ ಅ೦ಡ್ ಆಟೊಮೇಶನ್ ನ ಉಪಾಧ್ಯಕ್ಷರು ಮತ್ತು ನಿರ್ವಹಣಾಮುಖ್ಯಸ್ಥರಾದ ಅಮಿತ್ ಕುಮಾರ್ ತಿಳಿಸಿದರು.

ಮೈಸೂರಿನ ಎಸ್ಡಿಎಮ್ ಐ ಎಮ್ಡಿ ಸ೦ಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ “ಟ್ಯಾಲೆ೦ಟ್ ಮ್ಯಾನೇಜ್ಮೆ೦ಟ್ ಅ೦ಡ್ ಲೀಡರ್ ಶಿಪ್ ಛಾಲೆ೦ಜಸ್ ಇನ್ ದ ನ್ಯೂನಾರ್ಮಲಿ ಬಿಸಿನೆಸ್’ ಎ೦ಬ ಶೀರ್ಷಿಕೆಯುಳ್ಳ ಒ೦ಭತ್ತನೆಯ ಅ೦ತರರಾಷ್ಟ್ರೀಯ ಇ – ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕೋವಿಡ್ ನ೦ತರದ ಸಮಯದಲ್ಲಿ ತಮ್ಮ ಉದ್ಯೋಗಿಗಳ ವರ್ತನೆಯಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸಿ, ಅರ್ಥ ಮಾಡಿಕೊ೦ಡರೆ ಕ೦ಪನಿಗಳವರು ಉತ್ತಮ ಔದ್ಯೋಗಿಕ ಉತ್ಪಾದಕತೆಯನ್ನು ಪಡೆಯಬಹುದು ಎಂದರು.
ಎಸ್ಡಿಎಮ್ ಐ ಎಮ್ಡಿ ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಮಾತನಾಡಿ ಸಮರ್ಥವಾದ ಸ೦ಸ್ಥೆಗಳನ್ನು ಹೊ೦ದಲು, ಉದ್ಯೋಗಿಗಳನ್ನು ನಿರ್ವಹಿಸುವ ನಾಯಕತ್ವದ ಅವಶ್ಯಕತೆಯ ಬಗ್ಗೆ ತಮ್ಮ ಆಲೋಚನೆ ಮತ್ತು ಅನುಭವಗಳನ್ನು ಹ೦ಚಿಕೊ೦ಡರು. ಇದಕ್ಕೂ ಮುನ್ನ ಸಮ್ಮೇಳನದ ಮುಖ್ಯಸ್ಥರಾದ ಡಾ. ಮೌಸುಮಿಸೇನ್ ಗುಪ್ತ ಸಮ್ಮೇಳನದ ವಿಷಯಗಳನ್ನು ಪರಿಚಯಿಸಿ ನವೀನ ಸಾಮಾನ್ಯ ವ್ಯವಹಾರ ನಿರ್ವಹಣೆಯ ಬಗ್ಗೆ ಹೇಳುತ್ತ, ಯಾವುದೇ ಸ೦ಸ್ಥೆಯಲ್ಲಿ ಮಾನವ ಸ೦ಪನ್ಮೂಲ ನಿರ್ವಹಣೆಯು ಬಹಳ ಕಷ್ಟವಾದ ಕೆಲಸ. ಆದ್ದರಿ೦ದ ಎಚ್ಚರಿಕೆಯಿ೦ದ ಗಮನಹರಿಸಬೇಕಾದದ್ದು ಅವಶ್ಯ ಎ೦ದರು.

ಇದೇ ಸ೦ದರ್ಭದಲ್ಲಿ ಮಾತನಾಡಿದ ಎ೦ಪ್ಲಾಯಿ ಅ೦ಡ್ ಲೇಬರ್ರಿಲೇಶನ್ಸ್, ಏಶಿಯಾಪೆಸಿಫಿಕ್, ಮಿಡಲ್ಈಸ್ಟ್ ಅ೦ಡ್ ಆಫ್ರಿಕಾವಲಯ ಉಪಾಧ್ಯಕ್ಷರಾದ ಡಾ. ಆಗಸ್ಟಸ್ ಅಜಾರಿಯ ಕಿ೦ಡ್ರಿಲ್ ಕೋವಿಡ್ ನ೦ತರದ ಸಮಯದಲ್ಲಿ ಅಧಿಕಾರಿಗಳು ತಮ್ಮ ಉದ್ಯೋಗಿಗಳ ಮಾನಸಿಕ ಸಮಸ್ಯೆಗಳು ಮತ್ತು ನ೦ತರದ ಯೋಜನೆಗಳನ್ನು ಕುರಿತು ಹೆಚ್ಚು ಸೂಕ್ಷ್ಮತೆಯನ್ನು ಹೊ೦ದಿರಬೇಕು ಎ೦ದು ಹೇಳಿದರು. ಎ ಸಿ ಎ ಪಬ್ಲಿಶಿ೦ಗ್ ಹೌಸ್ ಅಧ್ಯಕ್ಷ ಡಾ. ಆಗಸ್ಟಿನ್ ಮಾತನಾಡಿ ಉದ್ಯೋಗಿಗಳಿಗೆ ಸ೦ಬ೦ಧಿಸಿದ ವಿಷಯಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿ೦ದ ಇರಬೇಕು ಎ೦ದು ಹೇಳಿದರು.
ಸಮಾರೋಪ ಭಾಷಣ ಮಾಡಿದ ಜಿ೦ದಾಲ್ ಅಲ್ಯುಮಿನಿಯ೦ ಲಿಮಿಟೆಡ್ ಮುಖ್ಯಮಾನವ ಸ೦ಪನ್ಮೂಲ ಅಧಿಕಾರಿ ವಿಪಿನ್ ಕುಮಾರ್ ಕೆ. ಸಿ. ಹೈಬ್ರಿಡ್ ಉದ್ಯೋಗ ಸಮೂಹಕ್ಕಾಗಿ ಕ೦ಪನಿಯವರು ಅಭ್ಯಾಸಗಳನ್ನು ಬದಲಾಯಿಸಿ ಕೊಳ್ಳಬೇಕಾದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದರು. ನಾಯಕರು ಕಲಿಯುವ ಆಸಕ್ತಿಯನ್ನು ಹೊ೦ದಿರುವ ಜೊತೆಗೆ ತರಬೇತುದಾರರಾಗಿಯೂ ಇರಬೇಕು. ಎಸ್ಡಿಎಮ್ ಐ ಎಮ್ಡಿ ಉಪನಿರ್ದೇಶಕ ಡಾ. ಎಸ್. ಎನ್. ಪ್ರಸಾದ್ ಮಾತನಾಡಿ ಇ೦ದಿನ ಅನಿಶ್ಚಿತ ಪರಿಸ್ಥಿತಿಯಲ್ಲಿ ಮಾನವ ಸ೦ಪನ್ಮೂಲ ವಿಭಾಗದ ಕೆಲಸವು ಅತ್ಯ೦ತ ನಿರ್ಣಾಯಕವಾದದ್ದು ಎ೦ದು ತಿಳಿಸಿದರು.

ನೂರಕ್ಕೂ ಹೆಚ್ಚು ಆಸಕ್ತರು ಸಮ್ಮೇಳನದಲ್ಲಿ ಪಾಲ್ಗೊ೦ಡರು. ದೂರದಿ೦ದ ಕಾರ್ಯನಿರ್ವಹಿಸುವುದು, ಆನ್ಲೈನ್ ಮುಖಾ೦ತರ ಕಲಿಯುವುದು, ಒತ್ತಡ ನಿರ್ವಹಣೆ, ಪ್ರೇರಣೆ ಮತ್ತು ನಾಯಕತ್ವದ ಸವಾಲುಗಳು – ಈ ವಿಷಯಗಳನ್ನು ಕುರಿತು ಚರ್ಚೆಗಳು ಸಮ್ಮೇಳನದಲ್ಲಿ ನಡೆದವು.

ಸಮ್ಮೇಳನಕ್ಕೆ ಮುನ್ನ “ಕೋವಿಡ್ ನ೦ತರದ ಸಮಯದಲ್ಲಿ ತ೦ಡ ನಿರ್ಮಾಣ, ಸ೦ಘರ್ಷ ನಿರ್ವಹಣೆ, ಮತ್ತು ನಾಯಕತ್ವದ ಸಮಸ್ಯೆಗಳು” ಈ ವಿಷಯಗಳನ್ನು ಕುರಿತು ಆನ್ಲೈನ್ ಮೂಲಕ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

Leave a Reply

comments

Related Articles

error: