
ಕರ್ನಾಟಕಪ್ರಮುಖ ಸುದ್ದಿಮನರಂಜನೆ
ಎಂಇಎಸ್ ಪುಂಡರ ವಿರುದ್ಧ ನಟ ನಿನಾಸಂ ಸತೀಶ್ ಕಿಡಿ
ರಾಜ್ಯ(ಬೆಂಗಳೂರು),ಡಿ.23 :- ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಡೆಸಿರುವ ಪುಂಡಾಟಿಕೆ ವಿರುದ್ಧ ನಟ ನೀನಾಸಂ ಸತೀಶ್ ಕಿಡಿಕಾರಿದ್ದಾರೆ.
ಪತ್ರದ ಮೂಲಕ ಎಚ್ಚರಿಕೆ ನೀಡಿರುವ ಅವರು ಇಲ್ಲೇ ಹುಟ್ಟಿ ಇಲ್ಲೇ ಬದುಕಿ ಇಂತಹ ಹೀನ ಕೃತ್ಯ ಮಾಡಿದ್ದು ಎಷ್ಟು ಸರಿ, ಶಾಂತಿಯಿಂದ ಬದುಕುತ್ತಿರುವ ನಾಡಿಗೆ ಕೊಳ್ಳಿ ಇಟ್ಟಿದ್ದು ಎಷ್ಟು ಸರಿ. ನಮ್ಮನ್ನು ಕೆಣಕಬೇಡಿ, ನಮ್ಮ ಸ್ವಾಭಿಮಾನವನ್ನು ಪ್ರಶ್ನೆ ಮಾಡಬೇಡಿ. ಸಮಯ ಬಂದರೆ ಅಣ್ಣಾವ್ರ ಗೋಕಾಕ್ ಚಳುವಳಿಯ ಮಾದರಿಯ ರೀತಿಯಲ್ಲಿ ಚಳುವಳಿ ನಡೆಸಲು ನಾವು ಸಿದ್ಧ. ಇದು ಎಚ್ಚರಿಕೆಯು ಹೌದು, ನಮ್ಮ ಕಾಳಜಿಯು ಹೌದು ಟ್ವೀಟ್ ಮಾಡಿದ್ದಾರೆ. (ಎಸ್.ಎಂ,ಎಸ್.ಎಚ್)