ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಬಂದ್ ಗೆ ನೈತಿಕ ಬೆಂಬಲ ನೀಡಿದ ಚಲನಚಿತ್ರ ವಾಣಿಜ್ಯ ಮಂಡಳಿ : ವಾಟಾಳ್ ನಾಗರಾಜ್ ಪ್ರತಿಭಟನೆ

ರಾಜ್ಯ(ಬೆಂಗಳೂರು),ಡಿ.25 :- ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಈ ಬಂದ್ ಗೆ ಕನ್ನಡ ಫಿಲ್ಮ್ ಚೇಂಬರ್ ಕೇವಲ ನೈತಿಕ ಬೆಂಬಲ ಘೋಷಿಸಿದೆ.

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಾ.ರಾ.ಗೋವಿಂದು ಚಿತ್ರರಂಗದ ವಿರುದ್ಧ ಕಿಡಿ ಕಾರುತ್ತಿದ್ದು, ಇಂದು ವಾಣಿಜ್ಯ ಚಿತ್ರ ಮಂಡಳಿಯ ಮುಂದೆ ವಾಟಳಾ ನಾಗರಾಜ್ ಪ್ರತಿಭಟನೆ ನಡೆಸಲಿದ್ದಾರೆ.

ಈ ಕುರಿತು ಮಾತನಾಡಿದ ಸಾ.ರಾ.ಗೋವಿಂದು, ನೈತಿಕ ಬೆಂಬಲ ಯಾರಿಗೆ ಬೇಕು.? ಸ್ವಯಂ ಪ್ರೇರಿತವಾಗಿ  ಬಂದ್ ಗೆ ಬರಬೇಕು, ಒಂದು ದಿನ ಚಿತ್ರರಂಗ ಬಂದ್ ಮಾಡಿದರೆ ಪ್ರಾಣ ಹೋಗಲ್.  ಡಾ.ರಾಜ್ ಕುಮಾರ್ ಇದ್ದಾಗ ಚಿತ್ರರಂಗವೇ ಬಂದ್  ಮಾಡುತ್ತಿತ್ತು ಎಂದು ಫಿಲ್ಮ್ ಚೇಂಬರ್ ನಿರ್ಧಾರಕ್ಕೆ   ಬೇಸರ ವ್ಯಕ್ತ ಪಡಿಸಿದ್ದಾರೆ. ಇನ್ನೂ ಬಂದ್ ದಿನ ಎಲ್ಲರೂ ಬಂದ್ ನಲ್ಲಿ ಭಾಗಿಯಾಗಬೇಕು ಎಂದು ಆಗ್ರಹಿಸಿ ಬಂದ್ ಬೆಂಬಲಿಸುವಂತೆ ಚೇಂಬರ್ ಮುಂದೆ ವಾಟಾಳ್ ನಾಗರಾಜ್ ಮಧ್ಯಾಹ್ನ 12 ಗಂಟೆಗೆ ಸತ್ಯಾಗ್ರಹ ನಡೆಸಲಿದ್ದಾರೆ.(ಎಸ್.ಎಂ)

Leave a Reply

comments

Related Articles

error: