ಮೈಸೂರು

ವೈಭವೋಪೇತವಾಗಿ ಹನುಮ ಜಯಂತಿ ಮೆರವಣಿಗೆಗೆ ಚಾಲನೆ

ಮೈಸೂರು,ಡಿ.25:- ಮೈಸೂರಿನಲ್ಲಿ ಇಂದು ಮೈಸೂರು ಹನುಮಂತೋತ್ಸವ ಸಮಿತಿ ವತಿಯಿಂದ ಮೂರನೆಯ ಬಾರಿಗೆ ವೈಭವೋಪೇತವಾಗಿ ಹನುಮ ಜಯಂತಿ ಮೆರವಣಿಗೆಯು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟಿತು.
ಈ ಕಾರ್ಯಕ್ರಮಕ್ಕೆ ಎಲ್ಲ ಹಿಂದೂ‌ಪರ ಸಂಘಟನೆಗಳು ಮೈಸೂರಿನ ಎಲ್ಲ ಪಕ್ಷಗಳ ಮುಖಂಡರು, ಶಾಸಕರುಗಳು, ನಿಗಮ ಮಂಡಳಿಗಳ ಅಧ್ಯಕ್ಷರುಗಳು, ನಗರ ಪಾಲಿಕೆ ಸದಸ್ಯರುಗಳು ಮತ್ತು ಅನೇಕ ಸಮಾಜ ಸೇವಕರು ಹನುಮಂತನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಮೈಸೂರು ನಗಾರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್ ವಿ ರಾಜೀವ್ ಪಲ್ಲಕ್ಕಿ ಹೊರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿದ ಅವರು ಎಲ್ಲಾ ಭಕ್ತರಿಗೂ ಹನುಮ ಜಯಂತಿಯ ಶುಭಾಶಯಗಳು. ಮಾರುತಿಯೂ ಸಮಸ್ತರಿಗೂ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ, ಎಲ್ಲರಿಗೂ ಒಳ್ಳೆಯದು ಮಾಡಲಿ. ಕೋವಿಡ್ ಎಂಬ ಮಹಾಮಾರಿಯನ್ನು ಹನುಮಂತ ಸಂಹರಿಸಲಿ ಎಂದರು.

ಸ್ಯಾಂಡಲ್ ವುಡ್ ನಟ ಸೂರಜ್ ಮಾತನಾಡಿ ಮೈಸೂರಿನಲ್ಲಿ ಹನುಮಜಯಂತಿಗೆ ಚಾಲನೆ ಸಿಕ್ಕಿರುವುದು ಬಹಳ ಸಂತಸ ತಂದಿದೆ. ಈ ಹಿಂದೆ ಈ ತೆರನಾದ ಕಾರ್ಯಕ್ರಮ ಹುಣಸೂರಿನಲ್ಲಿ ನಡೆದಿತ್ತು. ಇದೀಗ ಮೈಸೂರಿನಲ್ಲಿ ನಡೆಯುತ್ತಿರುವುದು ತುಂಬಾ ಖುಷಿ ನೀಡಿದೆ. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು.

ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಮಾತನಾಡಿ “ಮೈಸೂರಿನಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಬಹಳ ಖುಷಿಯಾದ ವಿಚಾರ. ಹನುಮ ಎಲ್ಲರಿಗೂ ಒಳ್ಳೆಯದು ಮಾಡಲಿ” ಎಂದರು. ಜೈ ಶ್ರೀರಾಮ್, ಜೈ ಜೈ ಹನುಮಾನ್, ಆಂಜನೇಯ, ಮಹಾರಾಜ ಎಂದೆಲ್ಲ ಘೋಷಣೆಗಳು ಮೊಳಗಿತು.

ಕಾರ್ಯಕ್ರಮದಲ್ಲಿ ಮಹಾಪೌರರಾದ ಸುನಂದ ಫಾಲನೇತ್ರ ,ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್,ರಾಮೇಗೌಡ, ಗಣೇಶ್,ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ, ಮೈಸೂರು ಹನುಮೋತ್ಸವ ಸಮಿತಿಯ ಪಧಾಧಿಕಾರಿಗಳಾದ ಸಂಜಯ್, ಪೈಲ್ವಾನ್ ಜೀವನ್ ಕುಮಾರ್,ವಿ ಎನ್ ದಾಸ್, ಪ್ರಜೀಶ್,ವಿಕಾಸ್, ಬಿಲ್ವಕುಮಾರ್,ಅಭಿಲಾಷ್, ಅಪ್ಪು ,ಮಧು, ಸಂತೋಷ್, ತೇಜಸ್,ಗಗನ್ ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: