ಸುದ್ದಿ ಸಂಕ್ಷಿಪ್ತ
ಉಚಿತ ಕಣ್ಣಿನ ತಪಾಸಣೆ ಶಿಬಿರ ಮೇ.8ಕ್ಕೆ
ಮೈಸೂರು. ಮೇ.7 : ದಿ|| ಬಿ.ಎಂ.ಮರಿಗೌಡರ ಸ್ಮರಣಾರ್ಥ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಮೇ.8ರ ಸೋಮವಾರ ಬೆಳಿಗ್ಗೆ 10ಕ್ಕೆ ಪಡುವಾರಹಳ್ಳಿಯ ಶ್ರೀವರಸಿದ್ಧಿ ಮಹದೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಶಿಬಿರವನ್ನು ಮೂಡಾ ಅಧ್ಯಕ್ಷ ಧ್ರುವಕುಮಾರ್ ಉದ್ಘಾಟಿಸುವರು, ಶಾಸಕ ವಾಸು ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಎನ್.ಎಂ.ರಾಜೇಶ್ವರಿ ಸೋಮು, ಪಡುವಾರಹಳ್ಳಿ ಗ್ರಾಮಾಭ್ಯುದಯ ಟ್ರಸ್ಟ್ ಅಧ್ಯಕ್ಷ ಮಹದೇವಸ್ವಾಮಿ, ಕಾಂಗ್ರೆಸ್ ಮುಖಂಡೆ ಸುಶೀಲಾ ಮರಿಗೌಡ, ಬಿ.ಎಂ.ನಾಗೇಶ್ ಹಾಗೂ ವಿಜಯನಗರ ಸಾಂಸ್ಕೃತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ವಹಿಸುವರು. ಶಿಬಿರವನ್ನು ವಿಜಯನಗರ ಸಾಂಸ್ಕೃತಿಕ ಸಂಸ್ಥೆ, ಪಡುವಾರಹಳ್ಳಿ ಗ್ರಾಮಾಭ್ಯುದಯ ಟ್ರಸ್ಟ್ , ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)