ಮೈಸೂರು

ನೀಟಾಗಿ ನಡೆದ ನೀಟ್ ಪರೀಕ್ಷೆ

ಪ್ರಮುಖಸುದ್ದಿ, ರಾಜ್ಯ(ಮೈಸೂರು) ಮೇ.7:-  ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಹಂಚಿಕೆಗೆ ನೀಟ್ ಪರೀಕ್ಷೆ ಕಡ್ಡಾಯವಾದ ಬಳಿಕ ಭಾನುವಾರ ದೇಶಾದ್ಯಂತ ನೀಟ್ ಪರೀಕ್ಷೆ ನಡೆಯಿತು.

ಸಿಬಿಎಸ್‍ಇ ರಾಷ್ಟ್ರಾದ್ಯಂತ ಏಕರೂಪ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುತ್ತಿದ್ದು, 11,35,104 ವಿದ್ಯಾರ್ಥಿಗಳು ಪರೀಕ್ಷೆಗೆ  ಹೆಸರು ನೋಂದಾಯಿಸಿಕೊಂಡಿದ್ದರು. 103 ನಗರಗಳ 2,200 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಮೈಸೂರು, ಕಲಬುರ್ಗಿ, ಬೆಳಗಾವಿಯಲ್ಲಿ ಪರೀಕ್ಷೆಗಳು ನಡೆದಿದೆ. ಪರೀಕ್ಷೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಸೂಕ್ತ ದಾಖಲಾತಿ ಸಲ್ಲಿಸದ ವಿದ್ಯಾರ್ಥಿಗಳುನ  ಪರೀಕ್ಷೆಗೆ ಪ್ರವೇಶ ಪತ್ರದ ಜೊತೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗದುಕೊಂಡು ಹೋಗಬೇಕಾಗಿತ್ತು. ಆಧಾರ್ ಕಾರ್ಡ್ ಇಲ್ಲದವರು ಸರ್ಕಾರದ ಯಾವುದಾದರೂ ಗುರುತಿನ ಪತ್ರವನ್ನು ತೆಗೆದುಕೊಂಡು ಹೋಗಬಹುದಿತ್ತು. ಪರೀಕ್ಷೆಗಳು ಬೆಳಗ್ಗೆ 10.30ಕ್ಕೆ ಆರಂಭವಾಗಿತ್ತು.  ಅಭ್ಯರ್ಥಿಗಳು 9.30ರ ಒಳಗೆ ಪರೀಕ್ಷಾ ಕೇಂದ್ರದಲ್ಲಿ ಇರೋದು ಕಡ್ಡಾಯ. ಒಂದು ನಿಮಿಷ ತಡವಾದರೂ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿಲ್ಲ ಎಂದು ಹೇಳಲಾಗಿತ್ತು.  ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಬೋರ್ಡ್ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಹಾಗೂ ಇನ್ನಿತರ ವಸ್ತುಗಳ ನಿಷೇಧ ಮಾಡಲಾಗಿತ್ತು. ಪರೀಕ್ಷೆ ಸುಸೂತ್ರವಾಗಿ ನಡೆಯಲು ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗಿತ್ತು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: