ಮೈಸೂರು

ಸಾಲ ಮರುಪಾವತಿಸಲಾಗದ ಹಿನ್ನೆಲೆ ಯುವಕ ನೇಣಿಗೆ ಶರಣು : ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಮೈಸೂರು, ಮೇ.8:- ಸಾಲ ಮಾಡಿ ತೀರಸಲಾಗದೆ  ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನರಸೀಪುರ ತಾಲೂಕಿನ ಯಡ್ತೊರೆಯಲ್ಲಿ ನಡೆದಿದೆ.

ಮೃತನನ್ನು  ಶಂಕರ್(26) ಎಂದು ಗುರುತಿಸಲಾಗಿದೆ. ಈತ ತನ್ನ ರೂಮಿನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಗರ್ಗೇಶ್ವರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೋಮ ಪ್ರಭಾ ಕಾರಣ. ಇವಳ ಹತ್ತಿರ ನಾನು ನನ್ನ ಮದುವೆಗೆ ಹಾಗೂ ಮನೆ ಖರ್ಚಿಗೆ ಒಂದು ಲಕ್ಷವನ್ನು 5% ಬಡ್ಡಿಯಲ್ಲಿ ಸಾಲ ತೆಗೆದುಕೊಂಡಿದ್ದೆ.  ನಾನು ಪ್ರತಿ ತಿಂಗಳು 5000ರೂ. ಕಟ್ಟುತ್ತಿದ್ದು, 3 ತಿಂಗಳಿನಿಂದ ಬಡ್ಡಿಕೊಡದ ಕಾರಣ ಮನೆ ಹತ್ತಿರ ಬಂದು ಮನೆ ಹರಾಜು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಬರೆಲಾಗಿದೆ. ಅಷ್ಟೇ ಅಲ್ಲದೇ ತನ್ನ ಕಣ್ಣನ್ನು ದಾನ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾನೆ. ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಮೃತನ ಇಚ್ಛೆಯಂತೆ ಮನೆಯವರು ನೇತ್ರಗಳನ್ನು ದಾನ ಮಾಡಿದ್ದಾರೆ. _ (ಮರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: