ಪ್ರಮುಖ ಸುದ್ದಿಮೈಸೂರು

ಕೊಳ್ಳೇಗಾಲ ಬಳಿ ಭೀಕರ ರಸ್ತೆ ಅಪಘಾತ : ಮೂವರ ದುರ್ಮರಣ

ಪ್ರಮುಖಸುದ್ದಿ, ರಾಜ್ಯ(ಕೊಳ್ಳೇಗಾಲ) ಮೇ.7:-  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ  ಸಂಭವಿಸಿದ ಭೀಕರ ಅಪಘಾತದಲ್ಲಿ  ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿಗಳಾದ ಕರಿಯಪ್ಪ (54),  ನಾಗೇಂದ್ರ(15),  ಮಹದೇವ(30) ಎಂದು ಗುರುತಿಸಲಾಗಿದೆ.  ಕೊಳ್ಳೇಗಾಲ ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಬಳಿ ಕುರಹಟ್ಟಿ ಹೊಸೂರು ಗ್ರಾಮದಿಂದ ರಾಮಾಪುರದ ಕಡೆಗೆ ಬರುತ್ತಿದ್ದ ಬೈಕಿಗೆ ರಾಮಾಪುರದಿಂದ ತಮಿಳುನಾಡಿನತ್ತ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಡಿಕ್ಕಿ ಹೊಡೆದಿದೆ‌. ಇದರ ಪರಿಣಾಮ ಬೈಕಿನಲ್ಲಿದ್ದ  ಮೂವರೂ ಕೆಳಕ್ಕುರುಳಿದ್ದು, ತೀವ್ರ ರೀತಿಯ ಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: