ಮೈಸೂರು

ಕುವೆಂಪು ಜಯಂತಿ ಆಚರಣೆ ವೇಳೆ ಎರಡು ಬಣಗಳ ನಡುವೆ ಗಲಾಟೆ

ಮೈಸೂರು,ಡಿ.29:- ಕುವೆಂಪು ಜಯಂತಿ ಆಚರಣೆ ನಡುವೆಯೇ ಗಲಾಟೆ ನಡೆದ ಘಟನೆ ಮೈಸೂರಿನ ವಿವಿ ಮೊಹಲ್ಲಾದ ಮಾತೃಮಂಡಳಿ ವೃತ್ತದಲ್ಲಿ  ನಡೆದಿದೆ.

ಕುವೆಂಪು ವೃತ್ತ, ಅಂಬೇಡ್ಕರ್ ವೃತ್ತ ಎಂದು ಪಟ್ಟು ಹಿಡಿದಿರುವ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಒಂದು ಬಣ ಕುವೆಂಪು ಜಯಂತಿ ಅಚರಣೆ ಆಯೋಜಿಸಿತ್ತು. ವೃತ್ತದ ಬಳಿ ಕುವೆಂಪು ಜಯಂತಿ ಅಚರಣೆಗೆ ಮತ್ತೊಂದು ಬಣ ವಿರೋಧ ವ್ಯಕ್ತಪಡಿಸಿದೆ. ಪೊಲೀಸ್ ಬಂದೋಬಸ್ತ್ ನಲ್ಲಿ ಕುವೆಂಪು ಜಯಂತಿ ಆಚರಣೆ ಮಾಡಲಾಗಿದೆ. ಆದರೆ ಪೊಲೀಸರು ವೃತ್ತದ ಒಳಗೆ ಕುವೆಂಪು ಫ್ಲೆಕ್ಸ್ ಹಾಕಲು ಅನುಮತಿ ನೀಡಿಲ್ಲ. ಹೀಗಾಗಿ ಎರಡು ಗುಂಪುಗಳು ಎರಡು ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ಕುಳಿತಿದ್ದರು ಎನ್ನಲಾಗಿದೆ. ವಿವಿ ಪುರಂ‌ನ ಟೆಂಪಲ್ ರಸ್ತೆ ಬಂದ್ ಮಾಡಿ ಅಕ್ರೋಶ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿದ್ದಾರೆ.  ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: