ಕರ್ನಾಟಕಪ್ರಮುಖ ಸುದ್ದಿ

ಅವಧಿ ಮೀರಿದ ಬಿಯರ್ ನಾಶ

ರಾಜ್ಯ(ದಾವಣಗೆರೆ) ,ಜ.1 :- ಮಾರಾಟವಾಗದೇ ಬಾಕಿ ಉಳಿದಿದ್ದ ಅವಧಿ ಮೀರಿದ ಹಾಗೂ ಮಾನವನ ಸೇವನೆಗೆ ಯೋಗ್ಯವಲ್ಲದ ವಿವಿಧ ಮಾದರಿಯ ಹಾಗೂ ವಿವಿಧ ಪ್ರಮಾಣದ 38 ಪೆಟ್ಟಿಗೆ 57 ಬಾಟಲ್ ನಲ್ಲಿನ 353.000 ಲೀ. ಬಿಯರ್ ಮತ್ತು 156 ಪೆಟ್ಟಿಗೆ 19 ಬಾಟಲ್ ನಲ್ಲಿನ 1296 ಲೀ. ಬಿಯರ್ ಅನ್ನು ದಾವಣಗೆರೆ ಜಿಲ್ಲೆ ಹರಿಹರ ಕೆಎಸ್‍ಬಿಸಿಎಲ್ ಲಿಕ್ಕರ್ ಡಿಪೋದಲ್ಲಿ ಗುರುವಾರದಂದು ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಹಾಗೂ ಅಬಕಾರಿ ಉಪ ಅಧೀಕ್ಷಕ ಕೆ.ಎಲ್.ನಾಗರಾಜ್ ಇವರುಗಳ ನೇತೃತ್ವದಲ್ಲಿ ಡಿಪೋ ಆವರಣದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಿಯಮಾನುಸಾರ ನಾಶಪಡಿಸಲಾಯಿತು.
ಈ ವೇಳೆ ದಾವಣಗೆರೆ ವಲಯ ನಂ.01 ಮತ್ತು 02ರ ಅಬಕಾರಿ ನಿರೀಕ್ಷಕರು, ಕೆ.ಎಸ್.ಬಿ.ಸಿ.ಎಲ್ ಡಿಪೋ ಅಬಕಾರಿ ನಿರೀಕ್ಷಕರು ಮತ್ತು ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ಪಂಚರ ಸಮಕ್ಷಮ ನಿಯಮಾನುಸಾರ ನಾಶಪಡಿಸಲಾಯಿತು. ಬಿಯರ್ ದಾಸ್ತಾನಿನ ಅಂದಾಜು ಮೌಲ್ಯ 8,71,550 ರೂ. ಗಳಾಗಿರುತ್ತದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಬಿ.ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: