ಮೈಸೂರು

ಬೃಹತ್ ಕೌಶಲ್ಯಾವೃದ್ಧಿ ಸ್ವಯಂ ಉದ್ಯೋಗ ಹಾಗೂ ಉದ್ಯೋಗ ನೊಂದಣಿ ಕುರಿತು ಮಾಹಿತಿ

ಮೈಸೂರು, ಜ.3:- ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ. ರಾಮದಾಸ್ ಅವರ    ನೇತೃತ್ವದಲ್ಲಿ ನಡೆಯುವ ಬೃಹತ್ ಕೌಶಲ್ಯಾವೃದ್ಧಿ ಸ್ವಯಂ ಉದ್ಯೋಗ ಹಾಗೂ ಉದ್ಯೋಗ ನೊಂದಣಿ ಕಾರ್ಯಕ್ರಮದ  ವಿಚಾರವಾಗಿ ಮೈಸೂರು ರೈಲು ನಿಲ್ದಾಣದಲ್ಲಿ, ಮೈಸೂರು ನಗರ ಬಸ್ ನಿಲ್ದಾಣ ಹಾಗೂ ಸಬರ್ಬನ್ ಬಸ್ ನಿಲ್ದಾಣದಲ್ಲಿ  ಶಾಸಕರು ಪ್ರಯಾಣಿಕರಿಗೆ ಕರಪತ್ರ ನೀಡುವ ಮೂಲಕ ಪಾಲ್ಗೊಳ್ಳುವಂತೆ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ಜೀವನ ರೂಪಿಸಿಕೊಳ್ಳುವ ಹಿತದೃಷ್ಟಿಯಿಂದ ಯಾವ-ಯಾವ ರೀತಿಯ ಕೌಶಲ್ಯ ತರಬೇತಿ ಬೇಕಾಗಿದೆ ಅದನ್ನು ನೀಡುವ ಮೂಲಕ, ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕಾಗಿದೆ. ಉದ್ಯೋಗಾವಕಾಶಗಳಿಂದ ವಂಚಿತರಾದವರು ಹೇಗೆ ಉದ್ಯೋಗ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು  ಮನವಿ ಮಾಡಿದರು.

ಎಲ್ಲ ಸ್ವಯಂ ಸೇವಕರು ಪ್ರತಿಯೊಬ್ಬರಿಗೆ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಕರಪತ್ರವನ್ನು ಎಲ್ಲರಿಗೂ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದರು.

ಈ ಸಂದರ್ಭದಲ್ಲಿ ಕೆ.ಆರ್. ಕ್ಷೇತ್ರದ ಬಿ.ಜೆ.ಪಿ. ಅಧ್ಯಕ್ಷರಾದ ವಡಿವೇಲು, ನಗರಪಾಲಿಕೆ ಸದಸ್ಯರಾದ  ಶಿವಕುಮಾರ್,  ಬಿ.ವಿ. ಮಂಜುನಾಥ್, ಶ್ರೀಮತಿ ಛಾಯಾದೇವಿ ನವೀನ್,  ರೂಪಯೊಗೇಶ್,  ಗೀತಾಶ್ರೀ ಯೋಗನಂದ,  ಶಾಂತಮ್ಮ,  ಶಾರದಮ್ಮ ಈಶ್ವರ್, ಬಿ.ಜೆ.ಪಿ. ಮುಖಂಡರಾದ ನಾಗೇಂದ್ರಕುಮಾರ್, ಶ್ರೀನಿವಾಸ್, ದೇವರಾಜೇಗೌಡ, ಪುರುಷೋತ್ತಮ್, ಶಿವಪ್ಪ, ಪ್ರಸಾದ್ ಬಾಬು, ರವಿಕುಮಾರ್, ರೇವತಿ, ಜಯಂತಿ, ರೇಣುಕ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: