
ಮೈಸೂರು
ಆಟೋ ಪಲ್ಟಿ : ಏಳು ಮಂದಿ ಗಂಭೀರ
ಮೈಸೂರು, ಮೇ.8: -ಚಾಲಕನ ನಿಯಂತ್ರಣ ಕಳೆದುಕೊಂಡ ಆಟೋವೊಂದು ಪಲ್ಟಿಯಾದ ಪರಿಣಾಮ ಏಳುಮಂದಿ ಗಂಭೀರ ಗಾಯಗೊಂಡ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಗಾಯಗೊಂಡವರನ್ನು ಶಾರದ, ನಾಗಮ್ಮ, ಮಂಜುಳ, ಮಲ್ಲೇಶ, ಚಿನ್ನಮ್ಮ, ನಿಖಿತ, ಚಾಲಕ ಬಸಪ್ಪ ಎಂದು ಗುರುತಿಸಲಾಗಿದೆ. ಶಾರದ ಮತ್ತು ನಾಗಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಂಜುಳ, ಮಲ್ಲೇಶ, ಚಿನ್ನಮ್ಮ, ನಿಖಿತ, ಅವರನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಚ್.ಡಿ.ಕೋಟೆ ತಾಲೂಕು ಹ್ಯಾಂಡ್ ಪೋಸ್ಟ್ ಬಳಿ ಸರಗೂರು ರಸ್ತೆಯಲ್ಲಿ ಘಟನೆ ನಡೆದಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. _ (ವರದಿ:ಎಸ್.ಎನ್)