ಕರ್ನಾಟಕಪ್ರಮುಖ ಸುದ್ದಿ

ಕಲ್ಲು ಬಂಡೆಗಳನ್ನು ನುಂಗಿದ ಡಿಸೈನ್ ವೀರರಿಗೆ ನಮ್ಮ ನೆಲ ಎಂಬುದು ನೆನಪಿಗೆ ಬಂದಿದೆ : ಹೆಚ್ ಡಿಕೆ ಸರಣಿ ಟ್ವಿಟ್

ರಾಜ್ಯ(ರಾಮನಗರ),ಜ.4 :- ರಾಮನಗರ ಜಿಲ್ಲೆಯ ಅಭಿವೃದ್ಧಿ  ಕುರಿತು  ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆದ ಗಲಾಟೆಯ ಮಧ್ಯೆಯೇ   ಡಿ.ಕೆ ಸಹೋದರರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ  ಕುಟುಕಿದ್ದಾರೆ.
ಕಲ್ಲು ಬಂಡೆಗಳನ್ನು ನುಂಗಿದ ಡಿಸೈನ್ ವೀರರಿಗೆ ಈಗ ಇದು ನಮ್ಮ ಜಲ, ನಮ್ಮ ನೆಲ ಎನ್ನುವುದು ನೆನಪಿಗೆ ಬಂದಿದೆ.  ಕನಕಪುರ, ರಾಮನಗರ ಯಾರೊಬ್ಬರ ಸ್ವತ್ತಲ್ಲ. ಇದೇ ನೆಲವನ್ನು ಸಹೋದರರು ಹೇಗೆಲ್ಲಾ ನುಂಗಿದ್ದಾರೆಂದು ಗೊತ್ತು. ರಾಮನಗರಕ್ಕೆ ನಾನು ರಿಯಲ್ ಎಸ್ಟೇಟ್ ಮಾಡಲಿಕ್ಕೆ ಬಂದವನಲ್ಲ. ಅಭಿವೃದ್ಧಿ ಮಾಡಲು ಬಂದವನು. ಹರದನಹಳ್ಳಿ ನನ್ನ ಜನ್ಮ ಸ್ಥಳ, ಬಿಡದಿ ಕರ್ಮಸ್ಥಳ, ಇದುವೇ ನನಗೆ ಧರ್ಮಸ್ಥಳ ಎಂದು ಟ್ವೀಟ್ ಮಾಡಿದ್ದಾರೆ.
ಹಾದಿ ತಪ್ಪಿದ ರಾಜಕಾರಣ ಬಹಳ ದಿನ ನಡೆಯಲ್ಲ. ಹಣ, ದರ್ಪ,ಧಮ್ಕಿ, ಧಿಮಾಕು ಸಾಕು.  ಅನುಭವದಿಂದ ಪಾಠ ಕಲಿತರೆ ಒಳ್ಳೆಯದು ಎಂದು ಸರಣಿ ಟ್ವೀಟ್ ಮೂಲಕ ಟ್ವೀಟ್ ಪ್ರಹಾರ ನಡೆಸಿದ್ದಾರೆ.(ಹೆಚ್.ಎಸ್, ಎಸ್.ಎಂ)

Leave a Reply

comments

Related Articles

error: