ಕ್ರೀಡೆದೇಶಪ್ರಮುಖ ಸುದ್ದಿ

ಕೊರೋನಾ ಹಿನ್ನೆಲೆ : ರಣಜಿ ಟ್ರೋಫಿ ಮುಂದೂಡಿಕೆ ; ಸೌರವ್ ಗಂಗೂಲಿ ಮಾಹಿತಿ

ದೇಶ(ನವದೆಹಲಿ),ಜ.5:- ಹೆಚ್ಚುತ್ತಿರುವ ಕೊರೋನಾ ವೈರಸ್ ಆತಂಕವನ್ನು ಗಮನದಲ್ಲಿಟ್ಟುಕೊಂಡು ರಣಜಿ ಟ್ರೋಫಿಯನ್ನು ಮರು ನಿಗದಿಪಡಿಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಈ ಟೂರ್ನಿಯು ಜನವರಿ 13 ರಿಂದ ಪ್ರಾರಂಭವಾಗಬೇಕಿತ್ತು, ಆದರೆ ಈಗ ಅದನ್ನು ಮುಂದೂಡಲಾಗಿದೆ. ಈ ಪಂದ್ಯಾವಳಿ ನಿಗದಿತ ಸಮಯಕ್ಕೆ ನಡೆಯಲಿದೆ ಎಂದು ಈ ಹಿಂದೆ ಮಾಹಿತಿ ಇತ್ತು. ಆದರೆ ಈಗ ಕೋವಿಡ್ 19 ರ ಆತಂಕದಿಂದಾಗಿ ಅದನ್ನು ಮುಂದೂಡಲಾಗಿದೆ. 2022 ರ ರಣಜಿ ಟ್ರೋಫಿಯನ್ನು ಮರು ನಿಗದಿಪಡಿಸಲಾಗುವುದು ಎಂದು ಸೌರವ್ ಗಂಗೂಲಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ರಣಜಿ ಟ್ರೋಫಿ ಜೊತೆಗೆ ಸಿಕೆ ನಾಯುಡು ಟ್ರೋಫಿ ಕೂಡ ಮುಂದೂಡಲ್ಪಟ್ಟಿದೆ. ಅದೇ ವೇಳೆ ಮಹಿಳಾ ಟಿ 20 ಲೀಗ್ ಅನ್ನು ಸಹ ಮುಂದೂಡಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಸುರಕ್ಷತೆಯೊಂದಿಗೆ ಬಿಸಿಸಿಐ ರಾಜಿ ಮಾಡಿಕೊಳ್ಳುವುದಿಲ್ಲ. ನಾವು ಎಲ್ಲಾ ಮೂರು ಟೂರ್ನಿಗಳನ್ನು ಮುಂದೂಡಲು ನಿರ್ಧರಿಸಿದ್ದೇವೆ. ಸಾಮಾನ್ಯ ಸ್ಥಿತಿಯಗೆ ಮರಳಿದ ನಂತರ ಪಂದ್ಯಾವಳಿಯನ್ನು ಪುನರಾರಂಭಿಸುವುದರ ಕುರಿತು ಚಿಂತನೆ ನಡೆಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: