ಮೈಸೂರು

ವಿದ್ಯಾರ್ಹತೆ ಜೊತೆ ಕೌಶಲ್ಯ ಪಡೆದರೆ ಉದ್ಯೋಗ ಸೃಷ್ಟಿ : ಫರ್ಹಾ ಫಾತಿಮಾ

ಮೈಸೂರು, ಜ.6:- ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾ ವಿದ್ಯಾಲಯವು ಕ್ಲಿಕ್ ಟು ಸರ್ಚ್ ಸಂಸ್ಥೆಯ ಸಹಯೋಗದೊಂದಿಗೆ ಎಲ್ಲಾ ಅಂತಿಮ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಆರು ದಿನಗಳ ಉದ್ಯೋಗ ನೇಮಕಾತಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು  ಕ್ಲಿಕ್ ಟು ಸರ್ಚ್ ಸಂಸ್ಥೆ ಸಿಇಒ ಫರ್ಹಾ ಫಾತಿಮಾ ಇವರು ಉದ್ಘಾಟಿಸಿದರು. ಇಂದಿನ ಯುಗದಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಹತೆಯ ಜೊತೆಗೆ ಕೌಶಲ್ಯಗಳನ್ನು ಪಡೆದರೆ ಮಾತ್ರ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು .ಆದ್ದರಿಂದ ಈ ತರಬೇತಿಯನ್ನು  ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಾಯಿನಾಥ ಮಲ್ಲಿಗೆಮಾಡು ಅವರು ಪದವಿಗೆ ಮೌಲ್ಯ ಬರುವುದು ಉತ್ತಮವಾದ ಉದ್ಯೋಗ ಸೃಷ್ಟಿಸಿಕೊಂಡಾಗ ಮಾತ್ರ ಈ ನಿಟ್ಟಿನಲ್ಲಿ ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿನಿಯರಿಗೆ  ಪ್ರತಿ ವರ್ಷವೂ ಉದ್ಯೋಗ ಕೌಶಲ ತರಬೇತಿ ಕಾರ್ಯಕ್ರಮವನ್ನು ಏಳು ದಿನಗಳವರೆಗೆ ಆಯೋಜಿಸುತ್ತಿದ್ದು ಇದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು  ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಕಾರಣವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಪದವಿ ಪಡೆಯುವ ಪ್ರತಿಯೊಬ್ಬರು ಉದ್ಯೋಗದೊಂದಿಗೆ ಭವಿಷ್ಯ ರೂಪಿಸಿಕೊಳ್ಳುವುದಾಗಿದೆ. ನಮ್ಮ ಕಾಲೇಜಿಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಹಲವು ಪ್ರತಿಷ್ಠಿತ ಉದ್ಯೋಗ ಕಂಪನಿಗಳು ಆಗಮಿಸಿ ಉದ್ಯೋಗ ಸಂದರ್ಶನ ನಡೆಸಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಮತ್ತು ಸಮರ್ಪಣಾ ಭಾವದಿಂದ ದುಡಿಯುವ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳುತ್ತಿವೆ.ಕೋವಿಡ್ ಸಂದರ್ಭದಿಂದಾಗಿ 2020-2021ನೇ ಸಾಲಿನಲ್ಲಿ 75ಕ್ಕೂ ಅಧಿಕ ವಿದ್ಯಾರ್ಥಿನಿಯರು ವಿಪ್ರೋ ಇನ್ಫೋಸಿಸ್ ಟಿ.ಸಿ.ಎಸ್. ಮೊದಲಾದ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಈ ತರಬೇತಿ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿನಿಯರಿಗೆ ಸಂವಹನ ಕೌಶಲ್ಯಗಳು, ಇಂಟರ್ ಪರ್ಸನಲ್ ಸ್ಕಿಲ್ಸ್, ಸಂದರ್ಶನ ಕೌಶಲ್ಯಗಳು, ತಾರ್ಕಿಕ ಸಾಮರ್ಥ್ಯ,ಮೌಖಿಕ ಸಾಮರ್ಥ್ಯ, ಸ್ವ ವಿವರ  ಬರವಣಿಗೆ, ಕೌಶಲ್ಯ ಪ್ರಸ್ತುತಿ ಕಲೆ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ ಎಂದರು.
ಚಿತ್ರದಲ್ಲಿ  ಐ.ಕ್ಯೂ.ಎ.ಸಿ.ಸಂಯೋಜಕರಾದ ಕೆ.ಎಸ್.ಸುಕೃತಾ, ಕಂಪ್ಯೂಟರ್ ಸೈನ್ಸ್‌ ವಿಭಾಗ  ಮುಖ್ಯಸ್ಥರಾದ
ರಮ್ಯಾ.ಎಸ್.ಕೆ, ಪ್ಲೇಸ್‌ಮೆಂಟ್  ಮತ್ತು
ಕ್ಲಿಕ್ ಟು ಸರ್ಚ್ ಸಂಸ್ಥೆಯ ತರಬೇತುದಾರರು ಮತ್ತು ವಿದ್ಯಾರ್ಥಿನಿ ಸಂಘದ  ಅಧ್ಯಕ್ಷೆ  ಸ್ನೇಹಾ ಸಿಂಗ್ ಹಾಜರಿದ್ದರು.

Leave a Reply

comments

Related Articles

error: