
ಕರ್ನಾಟಕಪ್ರಮುಖ ಸುದ್ದಿ
ಕನ್ನಡದ ಬಿಗ್ ಬಾಸ್ 9ನೇ ಆವೃತ್ತಿ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ
ರಾಜ್ಯ(ಬೆಂಗಳೂರು),ಜ.6 : -ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಬಿಗ್ ಬಾಸ್’ ಸೀಸನ್ 9 ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂಬ ಮಾತುಗಳು ಕೇಲಿ ಬರುತ್ತಿದೆ.
‘ಬಿಗ್ ಬಾಸ್ ಸೀಸನ್ 8’ ಕಳೆದ ಆಗಸ್ಟ್ ನಲ್ಲಿ ಮುಕ್ತಾಯಗೊಂಡಿತ್ತು. ಬಿಗ್ ಬಾಸ್ ಸೀಸನ್ 8 ಕಲರ್ಸ್ ಕನ್ನಡದ ಎಲ್ಲ ಟಿಆರ್ ಪಿ ದಾಖಲೆಗಳನ್ನು ಮುರಿದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕೊರೊನಾದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಸೀಸನ್ 8 ಅನ್ನು ಮತ್ತೆ ಆರಂಭಿಸುವ ಮೂಲಕ ರಿಯಾಲಿಟಿ ಶೋ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸಹ ಬಿಗ್ ಬಾಸ್ ಬರೆದಿತ್ತು. ಇದೀಗ 9ನೇ ಸೀಸನ್ ಮೇಲೆ ಎಲ್ಲರ ದೃಷ್ಠಿ ನೆಟ್ಟಿದೆ. ಯಾವಾಗ ಶೋ ಆರಂಭವಾಗಲಿದೆ ? ಮತ್ತು ಈ ಬಾರಿ ಯಾರು ಯಾರು ಶೋನಲ್ಲಿ ಸ್ಪರ್ಧಿಸಲಿದ್ದಾರೆ ? ಎಂಬ ಕುತೂಹಲ ಮನೆ ಮಾಡಿದೆ.
ಬಿಗ್ ಬಾಸ್ 9 ನೇ ಆವೃತ್ತಿಯು ಫೆಬ್ರವರಿಯ ಕೊನೆಯ ವಾರದಲ್ಲಿ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಬಹುಶಃ ಮುಂದಿನ ಕೆಲವೇ ದಿನಗಳಲ್ಲಿ ಘೋಷಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಶೋ ತಯಾರಕರು ಕಿರುತೆರೆಯ ಟಾಪ್ ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಂಪರ್ಕಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.(ಎಸ್.ಎಂ)