
ಮೈಸೂರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ : ಅನಿರ್ದಿಷ್ಟಾವಧಿ ಧರಣಿ
ಮೈಸೂರು, ಮೇ.8:- ಸೆಂಟರ್ ಆಫ್ ಟ್ರೇಡ್ ಯೂನಿಯನ್ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಇಎಸ್ ಐಸಿ ಯಿಂದ ವಿಮಾದಾರರು ಮತ್ತು ಕುಟುಂಬದ ಸದಸ್ಯರುಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ, ಅವ್ಯವಸ್ಥೆಯ ವಿರುದ್ಧ ಮತ್ತು ವಿವಿಧ ಸೌಲಭ್ಯಗಳಿಂದ ವಂಚನೆ ಮಾಡುತ್ತಿರುವ ಕುರಿತು ಮೈಸೂರಿನ ಮುಖ್ಯ ಇ.ಎಸ್.ಐ ಆಸ್ಪತ್ರೆ ಎದುರು ಹಗಲು ರಾತ್ರಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟಕಾರರು ಮಾತನಾಡಿ ತುರ್ತು ಸಂದರ್ಭದಲ್ಲಿ ಇ.ಎಸ್.ಐ ಮುಖಾಂತರ ಖಾಸಗಿ ಆಸ್ಪತ್ರೆಗೆ ಕಳುಹಿಸಿದಾಗ ಖಾಸಗಿ ಆಸ್ಪತ್ರೆಯಲ್ಲಿ ಇ.ಎಸ್.ಐ ರೋಗಿಗಳನ್ನು ತಾತ್ಸಾರದಿಂದ ನೋಡಲಾಗುತ್ತದೆ. ತುಂಬಾ ಸತಾಯಿಸಲಾಗುತ್ತದೆ. ಕೆಲವೊಮ್ಮೆ ನೋಡಲು ನಿರಾಕರಿಸುತ್ತಾರೆ ಎಂದರು. ಅದರಿಂದ ನಮಗೆ ಸಂಕಷ್ಟವುಂಟಾಗಿದ್ದು, ಇ.ಎಸ್.ಐ ಮಿತಿಯನ್ನು 15ಸಾವಿರದಿಂದ 21ಸಾವಿರಕ್ಕೆ ಏರಿಕೆ ಮಾಡಬೇಕು. ಸೂಪರ್ ಸ್ಪೆಶಾಲಿಟಿ ಸೌಲಭ್ಯ ಮುಂದುವರಿಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷ ಎನ್.ಕೆ.ಬಾಲಾಜಿರಾವ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.- (ವರದಿ:ಕೆ.ಎಸ್,ಎಸ್.ಎಚ್)