ಮೈಸೂರು

ಕಲಿಸು ಫೌಂಡೇಷನ್‌ ನ 50 ನೇ ಗ್ರಂಥಾಲಯ ಉದ್ಘಾಟಿಸಿದ ರಾಜವಂಶಸ್ಥ ಯದುವೀರ್

ಮೈಸೂರು, ಜ.6:- ಕಲಿಸು ಫೌಂಡೇಶನ್ ಈಗಾಗಲೇ ಸರ್ಕಾರಿ ಶಾಲೆಯ ಉನ್ನತಿಗೆ ಹಲವಾರು ಕಾರ್ಯಗಳನ್ನು ಮಾಡುತ್ತ ಬಂದಿದೆ ಸುಮಾರು 49 ಗ್ರಂಥಾಲಯಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲ ವಾಗುವ ರೀತಿಯಲ್ಲಿ ಯಶಸ್ವಿ ಗೊಳಿಸಿದೆ .

ಅದೇ ರೀತಿ ಇಂದು ಕಲಿಸು ಫೌಂಡೇಷನ್‌ ನ 50 ನೇ ಗ್ರಂಥಾಲಯವನ್ನು ಉದ್ಬೂರಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟಿಸಿದರು..

ಈ ಕಲಿಸು ಫೌಂಡೇಶನ್ , ಮೈಸೂರಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕೆಲಸ ಮಾಡುತ್ತಿರುವ ಎನ್.ಜಿ.ಒ ಆಗಿದೆ . ಈ ಸಂಸ್ಥೆಯು ಸುಮಾರು 60 ಸರ್ಕಾರಿ ಶಾಲೆಗಳಲ್ಲಿ 15000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ . ಕಲಿಸು ಫೌಂಡೇಶನ್ ಜ್ಞಾನಾಲಯಗಳನ್ನು ನಿರ್ಮಿಸುವ ಉಪಕ್ರಮವನ್ನು ಪ್ರಾರಂಭಿಸಿ ತನ್ಮೂಲಕ ಸರ್ಕಾರಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಸ್ತಕಗಳನ್ನು ಓದುವುದನ್ನು ಪ್ರೋತ್ಸಾಹಿಸುತ್ತಿದೆ .

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನ ಉದ್ಬೂರಿನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಂಥಾಲಯವನ್ನು ಉದ್ಘಾಟಿಸಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು,

ಈ ಯೋಜನೆಯನ್ನು ಕಲಿಸು ಫೌಂಡೇಷನ್ ಸಂಪೂರ್ಣವಾಗಿ ಕಾರ್ಯಗತಗೊಳಿಸಿದ್ದು ಮತ್ತು ಕಾರ್ಪೊರೇಟ್ ಕಂಪನಿ ವರ್ಲ್ಡ್‌ವೈಡ್ ಟೆಕ್ನಾಲಜೀಸ್‌ ( ಡಬ್ಲೂಡಬ್ಲೂಟಿ ) ಪ್ರಾಯೋಜಿಸಿದೆ .

ವಿನ್ಯಾಸ , ಪರಿಕಲ್ಪನೆ ಅಭಿವೃದ್ಧಿ , ಗೋಡೆಗಳ ಮೇಲೆ ಚಿತ್ರಕಲೆ , ಪುಸ್ತಕದ ಕಪಾಟುಗಳು , ಮೇಜುಗಳು , ಪುಸ್ತಕಗಳನ್ನು ಸಂಗ್ರಹಿಸುವಿಕೆ , ದೃಶ್ಯ ಸಾಧನಗಳು , ಕಲಾ ಕೆಲಸ , ಗ್ರಂಥಾಲಯದ ಅವಧಿಯನ್ನು ನಡೆಸಲು ಪ್ರತಿ ಗ್ರಂಥಾಲಯದಲ್ಲಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ.

ಒಂದು ವರ್ಷದ ನಿರ್ವಹಣೆಯನ್ನು ಕಲಿಸು ಫೌಂಡೇಶನ್ ನೋಡಿಕೊಳ್ಳುತ್ತದೆ ಮತ್ತು ನಂತರ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿಗೆ ವರ್ಗಾಯಿಸುತ್ತದೆ .

ಕಾರ್ಯಕ್ರಮದಲ್ಲಿ ಕಲಿಸು ಫೌಂಡೇಶನ್ ಸಂಸ್ಥಾಪಕರ ಸಿಇಓ ನಿಖಿಲೇಶ್ , ವಿಘ್ನೇಶ್ , ಮನೋಜ್ ಕುಮಾರ್, ಶಾಲಾ ಶಿಕ್ಷಕ ವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು . (ಕೆ.ಎಸ್,ಎಸ್. ಎಚ್)

Leave a Reply

comments

Related Articles

error: